ಅಂಕಿತಾ ಲೋಖಾಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ (ಸಂಗ್ರಹ ಚಿತ್ರ)
ಅಂಕಿತಾ ಲೋಖಾಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ (ಸಂಗ್ರಹ ಚಿತ್ರ)

ಪವಿತ್ರ ರಿಷ್ತಾ ಖ್ಯಾತಿಯ ಸುಶಾಂತ್-ಅಂಕಿತಾ ಬ್ರೇಕ್ ಆಪ್ ಆಗಿದ್ದು ಏಕೆ?

ಬಾಲಿವುಡ್ ನಲ್ಲಿ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ "ಪವಿತ್ರ ರಿಷ್ತಾ" ಖ್ಯಾತಿಯ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ ಬ್ರೇಕ್ ಅಪ್ ವಿಚಾರ ಇದೀಗ ಅಧಿಕೃತವಾಗಿದ್ದು...
Published on

ಮುಂಬೈ: ಬಾಲಿವುಡ್ ನಲ್ಲಿ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ "ಪವಿತ್ರ ರಿಷ್ತಾ" ಖ್ಯಾತಿಯ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ ಬ್ರೇಕ್ ಅಪ್ ವಿಚಾರ ಇದೀಗ  ಅಧಿಕೃತವಾಗಿದ್ದು, ಸ್ವತಃ ಸುಶಾಂತ್ ಸಿಂಗ್ ರಜಪೂತ್ ತಮ್ಮ ಬ್ರೇಕ್ ಅಪ್ ಗೆ ಕಾರಣ ಏನು ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.

ಕೆಲವೇ ತಿಂಗಳ ಹಿಂದಷ್ಟೇ ಪವಿತ್ರ ರಿಷ್ತಾ ಧಾರಾವಾಹಿ ಖ್ಯಾತಿಯ ಬಾಲಿವುಡ್ ನ ಹಾಟ್ ಕಪಲ್ಸ್ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ ಇದೇ ವರ್ಷಾಂತ್ಯದಲ್ಲಿ  ಮದುವೆಯಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು. ಆದರೆ ಇದೀಗ ಇದಕ್ಕೆ ವ್ಯತಿರಿಕ್ತ ಎಂಬಂತಹ ಸುದ್ದಿಗಳು ಕೇಳಿಬರುತ್ತಿದ್ದು, ಈ ಜೋಡಿ ಬೇರೆಯಾಗಿದೆ ಎಂದು ಹೇಳಲಾಗುತ್ತಿದೆ.  ಇದಕ್ಕೆ ಇಂಬು ನೀಡುವಂತೆ ಕಳೆದ ಕೆಲ ದಿನಗಳಿಂದ ಈ ನಟರ ಟ್ವೀಟ್ ಸರಣಿಗಳನ್ನು ಗಮನಿಸದರೆ ಅದು ನಿಜವೆಂದು ಅನ್ನಿಸದೇ ಇರದು.

ಮತ್ತೊಂದೆಡೆ ಸ್ವತಃ ಸುಶಾಂತ್ ಸಿಂಗ್ ರಜಪೂತ್ ತಮ್ಮ ಬ್ರೇಕ್ ಅಪ್ ಕುರಿತು ಟ್ವೀಟ್ ಮಾಡಿದ್ದು, ಜನ ಇಷ್ಟ ಬಂದ ಹಾಗೆ ಮಾತನಾಡುತ್ತಿದ್ದಾರೆ. ಆಕೆ (ಅಂಕಿತಾ ಲೋಖಾಂಡೆ)  ಮದ್ಯವ್ಯಸನಿಯೂ ಅಲ್ಲ, ನಾನು ಲಂಪಟ ವ್ಯಕ್ತಿಯೂ ಅಲ್ಲ. ಇಂತಹ ಬೆಳವಣಿಗೆ ದುರದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ.

ಈ ಜೋಡಿಯ ಬಗ್ಗೆ ಹಬ್ಬಿದ್ದ ಗಾಸಿಪ್ ಗಳ ಪ್ರಕಾರ ಸುಶಾಂತ್ ಬಗ್ಗೆ ಅಂಕಿತಾ ತೀರಾ ಪೊಸೆಸಿವ್ ಆಗಿದ್ದಳಂತೆ. ಸುಶಾಂತ್ ತನ್ನೊಂದಿಗೇ ಇರಬೇಕು ಮತ್ತು ಆತನ ಕುರಿತ ಎಲ್ಲ ನಿರ್ಧಾರಗಳಲ್ಲಿ  ತನ್ನ ಅಸ್ತಿತ್ವ ಇರಬೇಕು ಎಂದು ಭಾವಿಸುತ್ತಿದ್ದಳಂತೆ. ಆದರೆ ಇದು ಸುಶಾಂತ್ ಗೆ ಇಷ್ಟವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಸುಶಾಂತ್ ಅಂಕಿತಾಳಿಂದ ಬೇರಾಗಿದ್ದಾನೆ ಎಂದು ಹೇಳಲಾಗುತ್ತಿದೆ.   ಮತ್ತೊಂದು ಗಾಸಿಪ್ ಪ್ರಕಾರ ಸುಶಾಂತ್ ಗೆ ಮತ್ತೊಬ್ಬ ಯುವತಿಯ ಜೊತೆ ಸ್ನೇಹವಿದ್ದು, ಇದು ಅಂಕಿತಾ ಮತ್ತು ಆತನ ನಡುವೆ ಜಗಳಕ್ಕೆ ಕಾರಣವಾಗಿತ್ತು. ಇದೇ ಅವರ ಬ್ರೇಕ್ ಅಪ್ ಗೆ ಕಾರಣ  ಎಂದೂ ಹೇಳಲಾಗುತ್ತಿದೆ.

ಇಷ್ಟೆಲ್ಲಾ ಗಾಸಿಪ್ ಗಳ ನಡುವೆಯೂ ಶಾಂತವಾಗಿದ್ದ ಈ ಜೋಡಿ ಕ್ರಮೇಣ ತಮ್ಮ ಸ್ನೇಹ-ಸಂಬಂಧ ಕುರಿತಂತೆ ಒಂದೊಂದೇ ಟ್ವೀಟ್ ಮಾಡುವ ಮೂಲಕ ಬ್ರೇಕ್ ಅಪ್ ಕುರಿತ ಸುದ್ದಿಯನ್ನು ಜಗಜ್ಜಾಹಿರು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com