ಬಜಾಜ್ ವಿ15 ಬೈಕ್ ಖರೀದಿಸಿದ ಅಮೀರ್ ಖಾನ್!

ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಐಎನ್ ಎಸ್ ವಿಕ್ರಾಂತ್ ನ ಲೋಹದಿಂದ ತಯಾರಿಸಲ್ಪಟ್ಟ ಬಜಾಜ್ ವಿ15 ಬೈಕ್ ಅನ್ನು ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಖರೀದಿಸಿದ್ದಾರಂತೆ.
ಬಜಾಜ್ ವಿ15 ಬೈಕ್ ನೊಂದಿಗೆ ಅಮೀರ್ ಖಾನ್ (ಚಿತ್ರಕೃಪೆ: ಎನ್ ಡಿಟಿವಿ)
ಬಜಾಜ್ ವಿ15 ಬೈಕ್ ನೊಂದಿಗೆ ಅಮೀರ್ ಖಾನ್ (ಚಿತ್ರಕೃಪೆ: ಎನ್ ಡಿಟಿವಿ)
Updated on

ಮುಂಬೈ: ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಐಎನ್ ಎಸ್ ವಿಕ್ರಾಂತ್ ನ ಲೋಹದಿಂದ ತಯಾರಿಸಲ್ಪಟ್ಟ ಬಜಾಜ್ ವಿ15 ಬೈಕ್ ಅನ್ನು ಬಾಲಿವುಡ್ ನಟ ಮಿಸ್ಟರ್  ಪರ್ಫೆಕ್ಟ್ ಅಮೀರ್ ಖಾನ್ ಖರೀದಿಸಿದ್ದಾರಂತೆ.

ಬೈಕ್ ನ ತಯಾರಿಯ ಹಿಂದೆ ಇರುವ ಐತಿಹಾಸಿಕ ಹಿನ್ನಲೆ ತಿಳಿದು ಅಮೀರ್ ಖಾನ್ ಬೈಕ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ವಿಚಾರ ತಿಳಿದ ಕೂಡಲೇ ಬಜಾಜ್ ಆಟೋದ  ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು, ಅಮೀರ್ ಗಾಗಿ ಬೈಕ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಿಸಿ ನೀಡಿದ್ದಾರಂತೆ. ಅಮೀರ್ ಖರೀದಿಸಿರುವ ಬೈಕ್ ನ ಇಂಧನ ಟ್ಯಾಂಕ್ ಮೇಲೆ  ರಾಜೀವ್ ಬಜಾಜ್ ಗ್ರಾಫಿಕ್ಸ್ ನಿಂದ ತಯಾರಿಸಲಾದ "ಎ" ಅಕ್ಷರವನ್ನು ಮುದ್ರಿಸಿ, ಹಿಂಬದಿಯ ಸೀಟಿನ ಕೌಲ್ ಮೇಲೆ ಪ್ರೀತಿಯಿಂದ "ಛೋಟೆಲಾಲ್" ಎಂಬ ಸಹಿಯನ್ನು ಹೋಲುವ ಗ್ರಾಫಿಕ್ಸ್  ವಿನ್ಯಾಸ ಮಾಡಿಸಿದ್ದಾರೆ.



ಇದೀಗ ಈ ವಿನೂತ ಬಜಾಜ್ ವಿ15 ಬೈಕ್ ಅಮೀರ್ ಖಾನ್ ರ ಕೈ ಸೇರಿದ್ದು, ಸ್ವತಃ ರಾಜೀವ್ ಬಜಾಜ್ ಅವರು ಬೈಕ್ ಅನ್ನು ಅಮೀರ್ ಖಾನ್ ಗೆ ಒಪ್ಪಿಸಿದ್ದಾರೆ.

ಬಜಾಜ್ ನ ಹೆಗ್ಗುರುತುಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ ಬಜಾಜ್ ವಿ15 ಬೈಕ್ ಅನ್ನು 1971ರ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಯುದ್ಧ ವಿಮಾನವನ್ನು ಹೊತ್ತು ಸಮುದ್ರದಲ್ಲಿ ಸಾಗಿ  ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ಐಎನ್ ಎಸ್ ವಿಕ್ರಾಂತ್ ನೌಕೆಯ ಅವೇಶಷದ ಲೋಹಗಳಿಂದ ತಯಾರಿಸಲಾಗಿದ್ದು, ಇದೇ ಕಾರಣಕ್ಕಾಗಿ ಈ ಬೈಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com