ಭಾರತೀಯ ಸಂಗೀತ ಬೆಳವಣಿಗೆಗೆ ದೇಶದಲ್ಲಿ ಮೂಲಭೂತ ಸೌಕರ್ಯ ಕೊರತೆಯಿದೆ: ರೆಹಮಾನ್
ಮುಂಬೈ: ಸಂಗೀತ ಕ್ಷೇತ್ರದಲ್ಲಿ ತಮ್ಮ ಕೆಲಸಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೀರ್ತಿ ತಂದಿರಬಹುದು. ಆದರೆ ಭಾರತದಲ್ಲಿ ಸಂಗೀತಗಾರರಿಗೆ ವೈಯಕ್ತಿಕವಾಗಿ ಬೆಳೆಯಲು ಸಾಕಷ್ಟು ಮೂಲಭೂತ ಸೌಕರ್ಯಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಶ್ಚಾತ್ಯ ದೇಶಗಳಲ್ಲಿ ಸ್ವತಂತ್ರ ಕಲಾವಿದರ ಸಂಸ್ಕೃತಿ ಜನಪ್ರಿಯವಾಗಿದೆ. ಆದರೆ ಭಾರತದಲ್ಲಿ ಸಂಗೀತ ಚಲನಚಿತ್ರಗಳ ಮೇಲೆ ಅವಲಂಬಿತವಾಗಿದೆ. ಇಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ ಆದರೆ ಕಲಾವಿದರಿಗೆ ಪ್ರದರ್ಶನ ನೀಡಲು ಸರಿಯಾದ ವೇದಿಕೆ ಸಿಗುವುದಿಲ್ಲ ಎಂದರು.
ನಮ್ಮಲ್ಲಿ ಅನೇಕ ಪ್ರತಿಭಾವಂತರ ಪ್ರತಿಭೆ ಆಚೆ ಬರಬೇಕಿದೆ. ಆದರೆ ನಮ್ಮಲ್ಲಿ ಸರಿಯಾದ ಕಲಾ ಕೇಂದ್ರಗಳಿಲ್ಲ. ರೇಡಿಯೋ ಸಿಟಿಯಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ನಮ್ಮಲ್ಲಿ ಅನೇಕ ಮೆಟ್ರೋ ನಗರಿಗಳಿವೆ, ಆದರೆ ವಿಶ್ವಮಟ್ಟ ದರ್ಜೆಯ ಕಲಾ ಕೇಂದ್ರಗಳು ಎಲ್ಲಿವೆ? ನಮ್ಮಲ್ಲಿ ಗೀತನಾಟಕದ ಕೇಂದ್ರಗಳಿಲ್ಲ. ಸಾಂಸ್ಕೃತಿಕ ಬದಲಾವಣೆಯಾಗಬೇಕಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರು ಬಂದರೆ ಪ್ರವಾಸಿಗರು ಬರುತ್ತಾರೆ, ಭಾರತೀಯರ ಪ್ರದರ್ಶನವನ್ನು ವೀಕ್ಷಿಸುತ್ತಾರೆ ಎಂದರು.
ಬ್ರಾಡ್ ವೇಯಂತಹ ಸ್ಥಳವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸುವ ರೆಹಮಾನ್ ಆ ಮೂಲಕ ದೇಶದ ಮೂಲೆ ಮೂಲೆಗಳಿಂದ ಕಲಾವಿದರು ಆಗಮಿಸಿ ಪ್ರದರ್ಶನ ನೀಡಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ