ಶಾರೂಖ್ ಖಾನ್ ಮನೆಯಲ್ಲಿ ಟಿಮ್ ಕುಕ್ ಗಾಗಿ ಅದ್ದೂರಿ ಔತಣಕೂಟ

ಭಾರತ ಪ್ರವಾಸದಲ್ಲಿರುವ ಆಪಲ್ ಕಂಪನಿಯ ಕಾರ್ಯನಿರ್ವಾಕ ಮುಖ್ಯಸ್ಥ ಟಿಮ್ ಕುಕ್ ಅವರಿಗೆ ಬಾಲಿವುಡ್ ಸ್ಟಾರ್, ನಟ ಶಾರೂಖ್ ಖಾನ್ ತಮ್ಮ ಬಂಗಲೆ ಮನ್ನತ್​ನಲ್ಲಿ ...
ಔತಣ ಕೂಟದ ಫೋಟೋಗಳು
ಔತಣ ಕೂಟದ ಫೋಟೋಗಳು
Updated on: 

ಮುಂಬೈ: ಭಾರತ ಪ್ರವಾಸದಲ್ಲಿರುವ ಆಪಲ್ ಕಂಪನಿಯ ಕಾರ್ಯನಿರ್ವಾಕ ಮುಖ್ಯಸ್ಥ ಟಿಮ್ ಕುಕ್ ಅವರಿಗೆ ಬಾಲಿವುಡ್ ಸ್ಟಾರ್, ನಟ ಶಾರೂಖ್ ಖಾನ್ ತಮ್ಮ ಬಂಗಲೆ ಮನ್ನತ್​ನಲ್ಲಿ ಔತಣಕೂಟ ಏರ್ಪಡಿಸಿದ್ದರು.

ಟಿಮ್ ಕುಕ್ ಗೆ ಏರ್ಪಡಿಸಿದ್ದ ಔತಣ ಕೂಟದಲ್ಲಿ ಬಾಲಿವುಡ್ ನ ಹಲವು ನಟ-ನಟಿಯರು, ಉದ್ಯಮಿಗಳು ಭಾಗವಹಿಸುವ ಮೂಲಕ ಇನ್ನಷ್ಟು ರಂಗು ತುಂಬಿದರು.

ಭಾರತದಲ್ಲಿ ಆಪಲ್ ಕಂಪನಿಯನ್ನು ಭದ್ರವಾಗಿ ನೆಲೆಗೊಳಿಸುವ ಉದ್ದೇಶದಿಂದ ಐದು ದಿನಗಳ ಪ್ರವಾಸ ಕೈಗೊಂಡಿರುವ ಕುಕ್​ಗೆ ಬಾಲಿವುಡ್ ಮಂದಿ ಅದ್ದೂರಿ ಪಾರ್ಟಿ ನೀಡಿದ್ದರು.
ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಆಲಿಯಾ ಭಟ್, ಫರ್ಹಾ ಖಾನ್, ಪರಿಣಿತಿ ಚೋಪ್ರಾ, ಎ.ಆರ್. ರೆಹಮಾನ್, ಸಾನಿಯಾ ಮಿರ್ಜಾ, ಆಮೀರ್ ಖಾನ್ ಪಾಲ್ಗೊಂಡಿದ್ದರು.

ಇದು ಕೇವಲ ಅನೌಪಚಾರಿಕ ಭೇಟಿಯಾಗಿದ್ದು, ಇದರ ಹಿಂದೆ ಬೇರೇನು ಉದ್ದೇಶವಿಲ್ಲ ಎಂದು ಶಾರೂಖ್ ತಿಳಿಸಿದ್ದಾರೆ. ಪಾರ್ಟಿಯ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಶಾರೂಖ್ ಖಾನ್ ಸಂತೋಷ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com