
ಮುಂಬೈ: ಬಾಲಿವುಡ್ ನ ಹಾಟ್ ಕಪಲ್ ಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ರದ್ದು ಅಗ್ರಸ್ಥಾನ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಪತ್ನಿ ಐಶ್ ರ ಬೆನ್ನ ಹಿಂದೆ ನಿಂತು ಸದಾಕಾಲ ಅವರನ್ನು ಬೆಂಬಲಿಸುವ ಅಭಿಷೇಕ್ ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪತ್ನಿ ಐಶ್ವರ್ಯಾ ರೈ ಮುಜುಗರ ಪಡುವಂತೆ ಮಾಡಿದರು.
ಸರಬ್ಜಿತ್ ಸಿನಿಮಾದ ಪ್ರೀಮಿಯರ್ ಶೋ ಬಳಿಕ ಮಾಧ್ಯಮಗಳೆದುರು ಕಾಣಿಸಿಕೊಂಡ ಐಶ್ವರ್ಯಾರೈ ರನ್ನು ಸೆರೆ ಹಿಡಿಯಲು ಮಾಧ್ಯಮಗಳ ಕ್ಯಾಮೆರಾಮೆನ್ ಗಳು ಪ್ರಯತ್ನಿಸಿದರು. ಮಾಧ್ಯಮಗಳಿಗೆ ಪೋಸ್ ನೀಡಲು ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ರನ್ನು ಕೂಡ ಕರೆದರು. ಆದರೆ ಅವರ ಮಾತು ಕೇಳಿಸಿಯೂ ಕೇಳದಂತೆ ನಟಿಸಿದ ಅಭಿಷೇಕ್ ಮುಂದಕ್ಕೆ ಸಾಗಿದರು. ಬಳಿಕ ಐಶ್ ಮತ್ತಾರನ್ನೋ ಕರೆದು ಅವರನ್ನು ಕರೆಸಿಕೊಂಡರು. ಆದರೂ ಒಲ್ಲದ ಮನಸಿನಿಂದಲೇ ಕ್ಯಾಮೆರಾಗ ಪೋಸ್ ನೀಡಿದ ಅಭಿಷೇಕ್ ಮಧ್ಯದಲ್ಲಿಯೇ ಆಕೆಯನ್ನು ಬಿಟ್ಟುಹೋಗುವ ಮೂಲಕ ಮತ್ತೆ ಐಶ್ ಮಾಧ್ಯಮಗಳ ಎದುರು ಮುಜುಗರಕ್ಕೊಳಗಾಗುವಂತೆ ಮಾಡಿದರು.
ಈ ಸುದ್ದಿ ದೇಶೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅಭಿಷೇಕ್ ಮತ್ತು ಐಶ್ವರ್ಯಾ ರೈ ಸಂಸಾರದಲ್ಲಿ ಎಲ್ಲವೂ ಸರಿ ಇದೆಯೇ ಎಂಬ ಪ್ರಶ್ನೆ ಹುಟ್ಟುವ ರೀತಿಯಲ್ಲಿ ವರದಿಗಳನ್ನು ಬಿತ್ತರಿಸುತ್ತಿವೆ.
Advertisement