ಆಜಾನ್ ಬಗ್ಗೆ ಸೋನು ನಿಗಮ್ ಟ್ವೀಟ್ ಗೆ ನಟ ರಣ್ ದೀಪ್ ಹೂಡಾ ಬೆಂಬಲ

ಮುಸ್ಲಿಮರ ಬೆಳಗಿನ ಪ್ರಾರ್ಥನೆ(ಅಜಾನ್) ನ್ನು ಪ್ರಶ್ನಿಸಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ಟ್ವೀಟ್ ನ್ನು ಬಾಲಿವುಡ್ ನಟ ರಣ್ ದೀಪ್ ಹೂಡಾ ಬೆಂಬಲಿಸಿದ್ದಾರೆ.
ರಣ್ ದೀಪ್ ಹೂಡಾ- ಸೋನು ನಿಗಮ್
ರಣ್ ದೀಪ್ ಹೂಡಾ- ಸೋನು ನಿಗಮ್
Updated on
ಮುಂಬೈ: ಮುಸ್ಲಿಮರ ಬೆಳಗಿನ ಪ್ರಾರ್ಥನೆ(ಅಜಾನ್) ನ್ನು ಪ್ರಶ್ನಿಸಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ಟ್ವೀಟ್ ನ್ನು ಬಾಲಿವುಡ್ ನಟ ರಣ್ ದೀಪ್ ಹೂಡಾ ಬೆಂಬಲಿಸಿದ್ದಾರೆ. 
ಸೋನು ನಿಗಮ್ ಅವರ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಿದ್ದ ಪಶ್ಚಿಮ ಬಂಗಾಳದ ಮೌಲ್ವಿ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಬಾಲಿವುಡ್ ಗಾಯಕನ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ಸೋನ್ ನಿಗಮ್ ತಲೆ ಬೋಳಿಸಿಕೊಂಡಿದ್ದರು. ಈ ಬೆನ್ನಲ್ಲೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಣ್ ದೀಪ್ ಹೂಡಾ, ಮೌಲ್ವಿಯ ಫಾತ್ವಾಗೆ ಉತ್ತರಿಸಿರುವ ಸೋನು ನಿಗಮ್ ಸ್ವತಃ ತಾವೇ ಹೋಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಸೋನು ನಿಗಮ್ ಧ್ವನಿ ವರ್ಧಕಗಳ ಬಗ್ಗೆ ಮಾತನಾಡಿದರೇ ಹೊರತು ಧರ್ಮದ ಬಗ್ಗೆ ಅಲ್ಲ ಎಂದು ಹೂಡಾ ಸೋನು ನಿಗಮ್ ಗೆ ಬೆಂಬಲ ಸೂಚಿಸಿದ್ದಾರೆ. 
ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗ್ಗಿನ ಪ್ರಾರ್ಥನಾ ಸಮಯಕ್ಕೆ (ಅಜಾನ್‌) ಏಳಬೇಕಿದೆ.  ಇಂತಹ ಒತ್ತಾಯಪೂರ್ವಕ ಧಾರ್ಮಿಕ ಆಚರಣೆ ಭಾರತದಲ್ಲಿ ಯಾವಾಗ ಕೊನೆಯಾಗಲಿದೆ ಎಂದು ಸೋನು ನಿಗಮ್‌ ಏಪ್ರಿಲ್‌ 17ರ ಬೆಳಗ್ಗೆ 5.25ಕ್ಕೆ ಟ್ವೀಟ್‌ ಮಾಡಿದ್ದರು. ಏಪ್ರಿಲ್‌ 17ರ ಬೆಳಗ್ಗೆ ಸೋನು ಮಾಡಿದ್ದ ಸರಣಿ ಟ್ವೀಟ್‌ಗಳು ಟ್ವಿಟರ್ ನಲ್ಲಿ ಹೆಚ್ಚು ಚರ್ಚೆಗೊಳಗಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com