'ಯೆ ಹೈ ಇಂಡಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಬಾಬಾ ರಾಮ್‌ದೇವ್ ಎಂಟ್ರಿ

ಯೋಗ ಗುರು ಬಾಬಾ ರಾಮ್ ದೇವ್ ಯೆ ಹೈ ಇಂಡಿಯಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ...
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
ಮುಂಬೈ: ಯೋಗ ಗುರು ಬಾಬಾ ರಾಮ್ ದೇವ್ ಯೆ ಹೈ ಇಂಡಿಯಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. 
ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವ ಬಾಬಾ ರಾಮ್ ದೇವ್ ಚಿತ್ರದ ಸೈಯಾನ್ ಸೈಯಾನ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಚಿತ್ರವನ್ನು ಲೊಮ್ ಹರ್ಶ್ ಎಂಬುವರು ನಿರ್ದೇಶಿಸಿದ್ದು ಗವೀ ಚಹಾಲ್ ಮತ್ತು ದೀನಾ ಉಪ್ಪಾಳ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. 
ಇಡೀ ಪ್ರಪಂಚವನ್ನು ಆಳುವ ಯೋಗ್ಯತೆ ಭಾರತಕ್ಕಿದೆ. ಇಂತಹ ಘಟನೆಗಳನ್ನು ಯೆ ಹೈ ಇಂಡಿಯಾ ಸಿನಿಮಾದಲ್ಲಿ ತೋರಿಸಲಾಗಿದೆ. ಇಂತಹ ಚಿತ್ರಗಳನ್ನು ದೇಶದ ಜನತೆ ಪ್ರೋತ್ಸಾಹಿಸಬೇಕು ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. 
ಯೆ ಹೈ ಇಂಡಿಯಾ ಚಿತ್ರ ಇದೇ ತಿಂಗಳ 18ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com