ಟೈಗರ್ ಜಿಂದಾ ಹೈ ಭರ್ಜರಿ ಕಲೆಕ್ಷನ್: 7 ದಿನದಲ್ಲಿ 200 ಕೋಟಿ ಕ್ಲಬ್‌ಗೆ ಸೇರ್ಪಡೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದ್ದು ಸದ್ಯ 200 ಕೋಟಿ ಗಳಿಗೆ ಮಾಡಿದೆ...
ಕತ್ರಿನಾ ಕೈಫ್-ಸಲ್ಮಾನ್ ಖಾನ್
ಕತ್ರಿನಾ ಕೈಫ್-ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದ್ದು ಸದ್ಯ 200 ಕೋಟಿ ಗಳಿಗೆ ಮಾಡಿದೆ. 
ಕಳೆದ ವಾರ ಬಿಡುಗಡೆಯಾದ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಟೈಗರ್ ಜಿಂದಾ ಹೈ ಚಿತ್ರ ಬಿಡುಗಡೆಯಾದ ಏಳು ದಿನಕ್ಕೆ 206 ಕೋಟಿ ಗಳಿಕೆ ಮಾಡಿದೆ. 
ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಂತರ ಈ ವರ್ಷದಲ್ಲಿ ಬಿಡುಗಡೆಯಾಗಿ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಎರಡನೇ ಚಿತ್ರ ಇದಾಗಿದೆ. 
ಒಟ್ಟಾರೆ ಬಾಲಿವುಡ್ ನಲ್ಲಿ 2017ರಲ್ಲಿ ಬಿಡುಗಡೆಯಾದ ಚಿತ್ರಗಳು ಗಳಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿತ್ತು. ಬಾಹುಬಲಿ 2 ಚಿತ್ರ ಬಿಟ್ಟರೆ ಮತ್ಯಾವ ಚಿತ್ರ ಅಂತಹ ಗಳಿಕೆ ಮಾಡಿರಲಿಲ್ಲ. ಈ ವೇಳೆ ಅಜಯ್ ದೇವಗನ್ ಅಭಿನಯದ ಗೋಲ್ ಮಾಲ್ ಅಗೈನ್ ಚಿತ್ರ ಮಾತ್ರ 200 ಕೋಟಿ ಗಳಿಕೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com