ನಟ ಸಲ್ಮಾನ್ ನನ್ನು 'ಚೀಪ್' ಎಂದು ಕರೆದ ಪಾಕಿಸ್ತಾನಿ ನಟಿ: ವಿಡಿಯೋ ವೈರಲ್

ಭಾರತೀಯರನ್ನು ಹೀಯಾಳಿಸುವುದು ನೆರೆಯ ರಾಷ್ಟ್ರದ ಮಂದಿಗೆ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಪಾಕಿಸ್ತಾನಿ ನಟಿಯೊಬ್ಬಳು ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಚೀಪ್ ಎಂದು...
ಸಬ ಕಮರ್, ಸಲ್ಮಾನ್ ಖಾನ್
ಸಬ ಕಮರ್, ಸಲ್ಮಾನ್ ಖಾನ್
ಭಾರತೀಯರನ್ನು ಹೀಯಾಳಿಸುವುದು ನೆರೆಯ ರಾಷ್ಟ್ರದ ಮಂದಿಗೆ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಪಾಕಿಸ್ತಾನಿ ನಟಿಯೊಬ್ಬಳು ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಚೀಪ್ ಎಂದು ಕರೆದು ಅವಮಾನಿಸಿದ್ದಾಳೆ. 
ಪಾಕಿಸ್ತಾನಿ ನಟಿ ಸಬ ಕಮರ್ ಎಂಬಾಕೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟರ ಬಗ್ಗೆ ಮಾತನಾಡಿದ್ದಾಳೆ. ಹಾಗೆಯೇ ಸಲ್ಮಾನ್ ಖಾನ್ ಫೋಟೋ ತೋರಿಸಿದಾಗ ಸಲ್ಮಾನ್ ರನ್ನು Chhichora ಎಂದಿದ್ದಾಳೆ. Chhichora ಅಂದರೆ ಇಂಗ್ಲೀಷ್ ನಲ್ಲಿ ಚೀಪ್ ಎಂದರ್ಥ. 
ಸಲ್ಮಾನ್ ಗೆ ಚೀಪ್ ಎಂದು ಹೇಳಿದಲ್ಲದೆ ಆತನ ನೃತ್ಯದ ಬಗ್ಗೆ ಸಹ ಕಮೆಂಟ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com