100 ಕೋಟಿ ಕ್ಲಬ್ ಸೇರಿದ ಅಕ್ಷಯ್ ಅಭಿನಯದ ಜಾಲಿ ಎಲ್‍ಎಲ್‍ಬಿ 2

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದ್ದು, 100 ಕೋಟಿ ಕ್ಲಬ್ ಸೇರಿದೆ...
ಜಾಲಿ ಎಲ್ಎಲ್ ಬಿ2
ಜಾಲಿ ಎಲ್ಎಲ್ ಬಿ2
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದ್ದು, 100 ಕೋಟಿ ಕ್ಲಬ್ ಸೇರಿದೆ. 
ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಿಡುಗಡೆಯಾದ ಮೊದಲ ದಿನ 13.20 ಕೋಟಿ, ಎರಡನೇ ದಿನ 17.31 ಕೋಟಿ ಮೂರನೇ ದಿನ 19.95 ಕೋಟಿ ಗಳಿಸಿದ್ದು ಒಟ್ಟಾರೆ ಮೂರು ದಿನಗಳ ಕಲೆಕ್ಷನ್ 50.46 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ನಂತರ ದಿನಗಳಲ್ಲಿ ಕಲೆಕ್ಷನ್ ನಲ್ಲಿ ಇಳಿಮುಖವಾಗಿದ್ದು ಇದೀಗ 12 ದಿನದಲ್ಲಿ 100 ಕೋಟಿ ಗಳಿಕೆ ಮಾಡಿದೆ. 
ನಿರ್ದೇಶಕ ಸುಭಾಶ್ ಕಪೂರ್ 2013ರಲ್ಲಿ ಜಾಲಿ ಎಲ್‍ಎಲ್‍ಬಿ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಮೊದಲ ಅವತರಣಿಕೆ ಚಿತ್ರದಲ್ಲಿ ಅರ್ಶದ್ ವಾರ್ಸಿಯ ಅಭಿನಯ ಮರೆಯಲು ಸಾಧ್ಯವಿಲ್ಲ. ತನ್ನ ಬಡಪಾಯಿ ಕಕ್ಷಿದಾರನಿಗೆ ನ್ಯಾಯ ಒದಗಿಸಲು ಹೋರಾಡುವ ವಕೀಲನ ಪಾತ್ರದಲ್ಲಿ ವಾರ್ಸಿ ಮನೋಜ್ಞವಾಗಿ ಅಭಿನಯಿಸಿದ್ದರು. ಇದೀಗ ಚಿತ್ರದ ಮತ್ತೊಂದು ಸರಣಿಯಲ್ಲಿ ಅಕ್ಷಯ್ ಕುಮಾರ್ ಇನ್ನು ಅದ್ಭುತವಾಗಿ ನಡೆಸಿದ್ದು ನ್ಯಾಯಾಂಗ ವ್ಯವಸ್ಥೆಯ ಹುಳುಕುಗಳನ್ನು ತೋರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com