
ಮುಂಬೈ: ಬಾಲಿವುಡ್ ಬೆಡಗಿ ಆಯೇಶಾ ಟಾಕಿಯಾ ಬಹಳ ದಿನಗಳ ಬಳಿಕ ಸುದ್ದಿಗೆ ಗ್ರಾಸವಾಗಿದ್ದು, ಭಾರಿ ತಮ್ಮ ಹೊಸ ಲುಕ್ ನಿಂದಾಗಿ ಟ್ವಿಟರ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಈ ಹಿಂದೆ ಅತ್ಯಾಚಾರ ಸಂಬಂಧ ಹೇಳಿಕೆ ನೀಡಿದ್ದ ತಮ್ಮದೇ ಕುಟುಂಬಸ್ಥರ ವಿರುದ್ಧವೇ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ವಾಂಟೆಡ್ ಚಿತ್ರದ ನಾಯಕಿ, ಇದೀಗ ತಮ್ಮ ಹೊಸ ಲುಕ್ ನಿಂದಾಗಿ ಟ್ವಿಟರ್ ನಲ್ಲಿ ಟ್ರಾಲ್ ಆಗಿದ್ದಾರೆ. ತಮ್ಮ ತುಟಿ ಮತ್ತು ಕೆನ್ನೆ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ನಟಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದು, ಇದರಿಂದ ಅವರ ಸೌಂದರ್ಯವೇ ಬದಲಾಗಿ ಹೋಗಿದೆ. ಅವರ ಪ್ಲಾಸ್ಟಿಕ್ ಸರ್ಜರಿ ಅವರನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಮತ್ತು ಆಕೆಯ ಪತಿ ಇಬ್ಬರೂ ವೇದಿಕೆಗೆ ಆಗಮಿಸಿದಾಗ ಯಾವೊಬ್ಬ ಪತ್ರಕರ್ತರೂ ಕೂಡ ಆಕೆಯನ್ನು ಗುರುತು ಹಿಡಿಯಲಿಲ್ಲ.
ಕೊನೆಗೆ ಕಾರ್ಯಕ್ರಮ ಆಯೋಜಕರೇ ಆಕೆಯನ್ನು ನಟಿ ಆಯೇಶಾ ಟಾಕಿಯಾ ಎಂದು ಪರಿಚಸಿದಾಗ ನೆರೆದಿದ್ದ ಪತ್ರಕರ್ತರೆಲ್ಲರೂ ಬೆರಗಾಗಿದ್ದರು. ಕಾರಣ ನಟಿಯ ಮುಖ ಪ್ಲಾಸ್ಟಿಕ್ ನಂತಾಗಿ, ತುಟಿ ಸರ್ಜರಿಯಿಂದಾಗಿ ಊದಿಕೊಂಡಿತ್ತು. ತಮ್ಮ ಕ್ಯೂಟ್ ಲುಕ್ ನಿಂದಾಗಿಯೇ ಬಾಲಿವುಡ್ ನಲ್ಲಿ ಸಾಕಷ್ಟು ಅವಕಾಶ ಪಡೆದಿದ್ದ ನಟಿ ಆಯೇಶಾ ಇದೀಗ ಮತ್ತಷ್ಟು ಸೌಂದರ್ಯವತಿಯಾಗಲು ಹೋಗಿ ಇರುವ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ ಎನ್ನುತ್ತಿದೆ ಬಾಲಿವುಡ್. 2009ರಲ್ಲಿ ತೆರೆಕಂಡಿದ್ದ ವಾಂಟೆಡ್ ಚಿತ್ರದಲ್ಲಿ ಆಯೇಶಾ ಕೊನೆಯ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.
ಹಿಂದಿ ಮಾತ್ರವಲ್ಲದೇ ತೆಲುಗಿನಲ್ಲೂ ಕಾಣಿಸಿಕೊಂಡಿದ್ದ ನಟಿ ನಾಗಾರ್ಜುನ ಅಭಿನಯದ ಸೂಪರ್ ಚಿತ್ರದ ನಾಯಕಿಯಾಗಿದ್ದರು. ಆಯೇಷಾ, ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ ಫರ್ಹಾನ್ ಅಜ್ಮಿ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಮಿಖಾಯಿಲ್ ಎಂಬ 4 ವರ್ಷದ ಪುತ್ರನೂ ಇದ್ದಾನೆ.
ಇನ್ನು ತಮ್ಮ ಸೌಂದರ್ಯಕ್ಕೆ ಸಂಬಂಧಿಸಿದಂತೆ ಟ್ವೀಟಿಗರ ಅಪಹಾಸ್ಯಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಆಯೇಶಾ, ನೀವು ಹೇಗಿದ್ದರೂ ಸರಿ..ನಿಮ್ಮನ್ನು ನೀವು ಪ್ರೀತಿಸಿದರೆ ಸಾಕು...ಸೆಲ್ಫಿ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ ಟ್ವೀಟಿಗರ ಬಾಯಿ ಮುಚ್ಚಿಸಿದ್ದಾರೆ.
Advertisement