
ವಾಷಿಂಗ್ಟನ್: ಹಾಲಿವುಡ್ ನ ಟಿವಿ ಶೋ 'ಕ್ವಾಂಟಿಕೋ'ದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ನಟಿ ಪ್ರೀಯಾಂಕಾ ಚೋಪ್ರಾ ಅವರಿಗೆ ಗಾಯವಾಗಿದ್ದು, ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಶೂಟಿಂಗ್ ವೇಳೆ ಸ್ಟಂಟ್ ಮಾಡುತ್ತಿದ್ದ ಪ್ರಿಯಾಂಕಾ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ತಲೆಗೆ ಏಟಿ ಬಿದ್ದಿತ್ತು. ಕೂಡಲೇ ಪ್ರೀಯಾಂಕಾ ಅವರ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಪ್ರಸ್ತುತ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಪ್ರಿಯಾಂಕಾ ಅವರು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಕ್ವಾಂಟಿಕೋ 2ನೇ ಆವೃತ್ತಿಗಾಗಿ ನೂಯಾರ್ಕ್ ನಲ್ಲಿ ಶೂಟಿಂಗ್ ನಡೆಸುತ್ತಿದೆ. ಸೋಮವಾರದಿಂದ ಮತ್ತೆ ಚಿತ್ರೀಕರಣಕ್ಕೆ ಮರಳಿ ಬರಲಿದ್ದಾರೆಂದು ಚಿತ್ರದ ತಂಡ ಹೇಳಿಕೊಂಡಿದೆ.
Advertisement