ಬಾಲಿವುಡ್

ನಟಿ ಸೋನಿಕಾ ಸಾವು ಪ್ರಕರಣ: ನಟ ವಿಕ್ರಮ್ ಚಟರ್ಜಿಗೆ 14 ದಿನ ನ್ಯಾಯಾಂಗ ಬಂಧನ

ನಟಿ ಸೋನಿಕಾ ಸಾವು ಪ್ರಕರಣ: ನಟ ವಿಕ್ರಮ್ ಚಟರ್ಜಿಗೆ 14 ದಿನ ನ್ಯಾಯಾಂಗ ಬಂಧನ
ವಿಕ್ರಮ್ ಚಟರ್ಜಿ, ಸೋನಿಕಾ ಚೌಹಾಣ್
Published On :
ಕೋಲ್ಕತಾ: ಬೆಂಗಾಲಿ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಚಟರ್ಜಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. 
ಕಳೆದ ಶುಕ್ರವಾರ ಸೋನಿಕಾ ಚೌಹಾಣ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಪೊಲೀಸರು ವಿಕ್ರಮ್ ಚಟರ್ಜಿಯನ್ನು ಬಂಧಿಸಿದ್ದರು. ಸೋಮವಾರ ಪೊಲೀಸರು ಅಲಿಪೋರೆ ಕೋರ್ಟ್ ಮುಂದೆ ವಿಕ್ರಮ್ ನನ್ನು ಹಾಜರುಪಡಿಸಲಾಗಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. 
ಸೋನಿಕಾ ಸಾವಿನ ಬಳಿಕ ವಿಕ್ರಮ್ ಚಟರ್ಜಿಯವರು ತಲೆಮರೆಸಿಕೊಂಡಿದ್ದು ವಿಕ್ರಮ್ ಅವರು ರೇಡಿಯೋ ಟ್ಯಾಕ್ಸಿಯಲ್ಲಿ ದಕ್ಷಿಣ ಕೋಲ್ಕತಾದ ಕಸ್ ಬಾ ಪ್ರದೇಶದಲ್ಲಿರುವ ರಾಶ್ ಬೆಹಾರಿ ಅವೆನ್ಯೂ ಮಾರ್ಗದಲ್ಲಿನ ಆ್ಯಕ್ರೋಪೊಲೀಸ್ ಮಾಲ್ ತೆರಳುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ಆತನನ್ನು ಬಂಧಿಸಿದ್ದರು. 
ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿಕ್ರಮ್ ಚಟರ್ಜಿಯವರೊಂದಿಗೆ ನಟಿ ಸೋನಿಕಾ ಚೌಹಾಣ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದರು. ಈ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ವಿರುದ್ಧ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದು, ಪರಿಣಾಮ ಅಪಘಾತ ಸಂಭವಿಸಿ ನಟಿ ಸಾವನ್ನಪ್ಪಿದ್ದಾರೆಂಬ ಆರೋಪದಡಿ ಸೆಕ್ಷನ್ 304ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.