ಅತೀ ಹೆಚ್ಚು ಗಳಿಕೆ ಕಂಡ 5ನೇ ಇಂಗ್ಲಿಷೇತರ ಚಿತ್ರ: ಅಮೀರ್ ಖಾನ್ "ದಂಗಲ್" ಮತ್ತೊಂದು ದಾಖಲೆ

ಖ್ಯಾತ ನಟ ಅಮೀರ್ ಖಾನ್ ಅವರ ದಂಗಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಚೀನಾದಲ್ಲಿನ ಅಭೂತ ಪೂರ್ವ ಪ್ರದರ್ಶನದ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ವಿಶ್ವದ ಐದನೇ ಇಂಗ್ಲೀಷೇತರ ಚಿತ್ರ ಎಂಬ ಖ್ಯಾತಿಗೆ ದಂಗಲ್ ಪಾತ್ರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಖ್ಯಾತ ನಟ ಅಮೀರ್ ಖಾನ್ ಅವರ ದಂಗಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಚೀನಾದಲ್ಲಿನ ಅಭೂತ ಪೂರ್ವ ಪ್ರದರ್ಶನದ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ವಿಶ್ವದ ಐದನೇ ಇಂಗ್ಲೀಷೇತರ  ಚಿತ್ರ ಎಂಬ ಖ್ಯಾತಿಗೆ ದಂಗಲ್ ಪಾತ್ರವಾಗಿದೆ.

ಬಾಕ್ಸ್ ಆಫೀಸ್ ತಜ್ಞರ ಪ್ರಕಾರ ನಿಟೇಶ್ ತಿವಾರಿ ನಿರ್ದೇಶನದ ದಂಗಲ್ ಚಿತ್ರದ ಗಳಿಕೆ ಈ ವಾರ 300 ಮಿಲಿಯನ್ ಡಾಲರ್ ಮೀರಿದ್ದು, ಇಷ್ಟು ಪ್ರಮಾಣದ ಗಳಿಕೆ ಕಂಡ ವಿಶ್ವದ 5ನೇ ಇಂಗ್ಲಿಷೇತರ ಚಿತ್ರ ಎಂಬ ಕೀರ್ತಿಗೆ ದಂಗಲ್  ಪಾತ್ರವಾಗಿದೆ. ದಂಗಲ್ ಚಿತ್ರ ತೆರೆಕಂಡ ಬಳಿಕ ಭಾರತದಲ್ಲಿ 84.4  ಮಿಲಿಯನ್ ಡಾಲರ್ ಗಳಿಕೆ ಕಂಡಿದ್ದು, ಚೀನಾದಲ್ಲಿ ಬರೊಬ್ಬರಿ 179.8 ಮಿಲಿಯನ್ ಡಾಲರ್ ಹಣವನ್ನು ಬಾಚಿದೆ. ಆ ಮೂಲಕ ತನ್ನ ಗಳಿಕೆಯನ್ನು ದಂಗಲ್ ಚಿತ್ರ 301  ಮಿಲಿಯನ್ ಡಾಲರ್ ಗೆ ಏರಿಕೆ  ಮಾಡಿಕೊಂಡಿದೆ.

ಈ ಹಿಂದೆ 4 ಇಂಗ್ಲಿಷೇತರ ಚಿತ್ರಗಳು 300 ಮಿಲಿಯನ್ ಡಾಲರ್ ಹಣ ಗಳಿಕೆ ಸಾಧನೆ ಮಾಡಿದ್ದವು. ಚೀನಾದ "ದಿ ಮರ್ಮೇಡ್" (533 ಮಿಲಿಯನ್ ಡಾಲರ್ ಗಳಿಕೆ) ಮತ್ತು ಮಾನ್ ಸ್ಟರ್ ಹಂಟ್ (386 ಮಿಲಿಯನ್ ಡಾಲರ್), ಫ್ರಾನ್ಸ್ ನ  "ದಿ ಇನ್ ಟಚಬಲ್ಸ್ (427 ಮಿಲಿಯನ್ ಡಾಲರ್) ಮತ್ತು ಜಪಾನ್ ನ "ಯುವರ್ ನೇಮ್" (354 ಮಿಲಿಯನ್ ಡಾಲರ್) 300 ಮಿಲಿಯನ್ ಡಾಲರ್ ಕ್ಲಬ್ ಸೇರಿದ ಇಂಗ್ಲಿಷೇತರ ಚಿತ್ರಗಳಾಗಿವೆ.

ದಂಗಲ್ ಚಿತ್ರ ಖ್ಯಾತ ಕುಸ್ತಿ ಪಟು ಮಹಾವೀರ್ ಸಿಂಗ್ ಫೋಗಟ್ ಅವರ ಜೀವನಾಧಾರಿತ ಚಿತ್ರವಾಗಿದ್ದು, ಕ್ರೀಡಾಪಟುವೊಬ್ಬರ ಜೀವನಾಧಾರಿತ ಚಿತ್ರವೊಂದು ವಿದೇಶದಲ್ಲಿ 100 ಮಿಲಿಯನ್ ಡಾಲರ್ ಗೂ ಅಧಿಕ ಪ್ರಮಾಣದ ಗಳಿಕೆ  ಕಂಡ ಮೊದಲ ಚಿತ್ರ ಎಂಬ ಖ್ಯಾತಿಗೂ ದಂಗಲ್ ಪಾತ್ರವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com