ಭಾರೀ ಮೊತ್ತಕ್ಕೆ ರೋಬೋ 2.0 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ರೋಬೋ 2.0 ಚಿತ್ರದ ಸ್ಯಾಟಲೈಟ್ ಹಕ್ಕನ್ನು ಜೀ ನೆಟ್ ವರ್ಕ್ ಭಾರೀ ಮೊತ್ತಕ್ಕೆ ಖರೀದಿಸಿದೆ...
ರಜನಿಕಾಂತ್
ರಜನಿಕಾಂತ್
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ರೋಬೋ 2.0 ಚಿತ್ರದ ಸ್ಯಾಟಲೈಟ್  ಹಕ್ಕನ್ನು ಜೀ ನೆಟ್ ವರ್ಕ್ ಭಾರೀ ಮೊತ್ತಕ್ಕೆ ಖರೀದಿಸಿದೆ. 
ಚಿತ್ರರಂಗದ ಮೂಲಗಳ ಪ್ರಕಾರ ಜೀ ನೆಟ್ ವರ್ಕ್ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಬರೋಬ್ಬರಿ 110 ಕೋಟಿ ರುಪಾಯಿಗೆ ಖರೀದಿಸಿದೆ. 
ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ 2010ರ ಬ್ಲಾಕ್ ಬಸ್ಟರ್ ಚಿತ್ರ ಎಂಧಿರನ್ ಚಿತ್ರದ ಮೂದುವರೆದ ಭಾಗವಾಗಿದ್ದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ದೀಪಾವಳಿಗೆ ತೆರೆಗೆ ಅಪ್ಪಳಿಸಲಿದೆ. 
ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀ ನೆಟ್ ವರ್ಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಚಿತ್ರದಲ್ಲಿ ಆಮಿ ಜಾಕ್ಸನ್, ಸುಧಾನ್ಶು ಪಾಂಡೆ ಮತ್ತು ಅದಿಲ್ ಹುಸೈನ್ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com