ಸದ್ಯಕ್ಕೆ ಮಕ್ಕಳ ಬಗ್ಗೆ ಚಿಂತೆಯಿಲ್ಲ: ಬಿಪಾಶಾ ಬಸು

ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್ ನಟಿ ಬಿಪಾಶಾ ಬಸು, ಈ ಕೆಟ್ಟ ಕುತೂಹಲ ಕಿರಿಕಿರಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ.
ಬಾಲಿವುಡ್ ನಟಿ ಬಿಪಾಶಾ ಬಸು
ಬಾಲಿವುಡ್ ನಟಿ ಬಿಪಾಶಾ ಬಸು
ಮುಂಬೈ: ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್ ನಟಿ ಬಿಪಾಶಾ ಬಸು, ಈ ಕೆಟ್ಟ ಕುತೂಹಲ ಕಿರಿಕಿರಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ. 
ಕಳೆದ ಏಪ್ರಿಲ್ ನಲ್ಲಿ ನಟ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ವಿವಾಹವಾಗಿದ್ದ ಬಿಪಾಶಾ ಬಸು, ಮೊದಲ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದವು. 
ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ೩೮ ವರ್ಷದ ನಟಿ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದು, ಇಂತಹ ವಿಷಯವಿದ್ದರೆ ನಾನೇ ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳ ಜೊತೆಗೆ ಹಂಚಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. 
"ನಾನು ಗರ್ಭಿಣಿಯಾಗಿದ್ದೇನೆ ಎಂಬ ಕುತೂಹಲ.. ಒಂದು ರೀತಿಯಲ್ಲಿ ಸಿಹಿಯಾಗಿದ್ದರು, ಬಹಳ ಕಿರಿಕಿರಿ ಉಂಟುಮಾಡುತ್ತದೆ, ಇದು ಬೇಗ ಘಟಿಸುವಂತೆ ನಿರೀಕ್ಷಿಸುತ್ತಿರುವವರನ್ನು ನಿರಾಸೆಗೊಳಿಸುತ್ತಿದ್ದೇನೆ ಕ್ಷಮಿಸಿ" ಎಂದು ಬಿಪಾಶಾ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. 
"ಸದ್ಯಕ್ಕೆ ಮಗುವನ್ನು ಹೊಂದುವ ಯಾವುದೇ ಯೋಜನೆಗಳನ್ನು ನಾವು ಹಾಕಿಕೊಂಡಿಲ್ಲ. ನಾವು ಅದನ್ನು ಯೋಜಿಸಿದಾಗ, ನಮಗೆ ಶುಭ ಹಾರೈಸುವವರ ಜೊತೆಗೆ ಹಂಚಿಕೊಳ್ಳುತ್ತೇವೆ" ಎಂದು ಕೂಡ ಅವರು ತಿಳಿಸಿದ್ದಾರೆ. 
"ನಿರಂತರವಾಗಿ ಊಹಿಸುವ ಈ ಆಟ ಬೇಸರ ತರಿಸುತ್ತದೆ.. ನಾನು ನೇರವಾದ ವ್ಯಕ್ತಿ,. ಆದುದರಿಂದ ಬರೆದದ್ದನ್ನೆಲ್ಲಾ ನಂಬಬೇಡಿ. ಎಲ್ಲರಿಗು ಧನ್ಯವಾದ" ಎಂದು ಬಿಪಾಶಾ ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com