ಬಾಹುಬಲಿ 2 ಏಳನೇ ದಿನಕ್ಕೆ 860 ಕೋಟಿ ಕಲೆಕ್ಷನ್, ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಚಿತ್ರ

ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ವಿಶ್ವದಾದ್ಯಂತ ಏಳನೇ ದಿನಕ್ಕೆ 860 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದ್ದ ಆಮೀರ್...
ಬಾಹುಬಲಿ-2
ಬಾಹುಬಲಿ-2
ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ವಿಶ್ವದಾದ್ಯಂತ ಏಳನೇ ದಿನಕ್ಕೆ 860 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದ್ದ ಆಮೀರ್ ಖಾನ್ ನಟನೆಯ ಪಿಕೆ ಚಿತ್ರವನ್ನು ಹಿಂದಿಕ್ಕಿದೆ. 
ಏಪ್ರಿಲ್ 28ರಂದು ವಿಶ್ವದಾದ್ಯಂತ 9000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ 2 ಬಾಕ್ಸ್ ಆಫೀಕ್ ಕಲೆಕ್ಷನ್ ನಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾಗಿ ಏಳನೇ ದಿನಕ್ಕೆ ಪಿಕೆ ಚಿತ್ರ ಗಳಿಸಿದ್ದ 792 ಕೋಟಿ ಕಲೆಕ್ಷನ್ ಅನ್ನು ಬಾಹುಬಲಿ 2 ಹಿಂದಿಕ್ಕಿ 860 ಕೋಟಿ ಕಲೆಕ್ಷನ್ ಮಾಡಿದೆ. ಆ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಚಿತ್ರಗಳ ಪಟ್ಟಿಯಲ್ಲಿ ಬಾಹುಬಲಿ 2 ಅಗ್ರಸ್ಥಾನ ಸಂಪಾದಿಸಿದೆ. ಸದ್ಯ ಭಾರತದಲ್ಲಿ ಬಾಹುಬಲಿ 2 ಚಿತ್ರ 695 ಕೋಟಿ ಮತ್ತು ವಿದೇಶಗಳಲ್ಲಿ 165 ಕೋಟಿ ಕಲೆಕ್ಷನ್ ಮಾಡಿದೆ. 
ನಿರ್ದೇಶಕ ಎಸ್ಎಸ್ ರಾಜಮೌಳಿ ಕನಸಿನ ಕೂಸು ಬಾಹುಬಲಿ 2 ಸದ್ಯ ವಿಶ್ವದಾದ್ಯಂತ 860 ಕೋಟಿ ಕಲೆಕ್ಷನ್ ಮಾಡಿದ್ದು ಇನ್ನೇರಡು ದಿನಗಳಲ್ಲಿ 1000 ಕೋಟಿ ಕಲೆ ಹಾಕುವ ಸಾಧ್ಯತೆ ಇದೆ. ಬಾಹುಬಲಿ 2 ಚಿತ್ರ 1000 ಕೋಟಿ ಕಲೆಕ್ಷನ್ ಮಾಡಿದೆ. ಅದು ಇಡೀ ಭಾರತೀಯ ಚಿತ್ರರಂಗದ ಮೈಲಿಗಲ್ಲು ಆಗಲಿದೆ. 
ಬಾಹುಬಲಿ 2 ಚಿತ್ರ ಬಹುತಾರಾಗಣವನ್ನು ಒಳಗೊಂಡಿತ್ತು. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನ ಭಾಟಿಯಾ, ರಮ್ಯ ಕೃಷ್ಣ, ನಾಸಿರ್, ಸತ್ಯರಾಜ್ ಅಭಿನಯಿಸಿದ್ದಾರೆ. ಸತತ ಐದು ವರ್ಷಗಳ ಕಾಲ ಚಿತ್ರೀಕರಣದಲ್ಲಿ ಬಾಹುಬಲಿ 1 ಹಾಗೂ ಬಾಹುಬಲಿ 2 ಚಿತ್ರ ತೆರೆಗೆ ಬಂದಿದೆ. ಇನ್ನು 2015ರಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ 2 ಚಿತ್ರ 650 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com