ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ "ಎಮೋಜಿ": ಈ ಖ್ಯಾತಿಗೆ ಪಾತ್ರರಾದ ಮೊಟ್ಟ ಮೊದಲ ಬಾಲಿವುಡ್ ನಟ!
ಮಂಬೈ: ಖ್ಯಾತ ಬಾಲಿವುಡ್ ನಟ ಸಲ್ನಾನ್ ಖಾನ್ ಅವರು ಟ್ಯೂಬ್ ಲೈಟ್ ಚಿತ್ರ ಪ್ರಚಾರದಲ್ಲಿ ತೊಡಗಿರುವಂತೆಯೇ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.
ಹೌದು..ಟ್ಯೂಬ್ ಲೈಟ್ ನಟ ಸಲ್ಮಾನ್ ಖಾನ್ ಇದೀಗ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ಟ್ವಿಟರ್ ನಲ್ಲಿ ಎಮೋಜಿ ಕ್ಯಾರೆಕ್ಟರ್ ಪಡೆದ ಮೊದಲ ಬಾಲಿವುಡ್ ನಟ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ನಟ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್ ಲೈಟ್ ಚಿತ್ರ ಇದೇ ರಂಜಾನ್ ಹಬ್ಬದಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಭಾರಿ ಪ್ರಚಾರದಲ್ಲಿ ತೊಡಗಿದೆ.
ಚಿತ್ರಕಥೆ ಮಾತ್ರವಲ್ಲದೆ ಪ್ರಚಾರವನ್ನೂ ವಿಭಿನ್ನವಾಗಿ ಮಾಡುತ್ತಿರುವ ಟ್ಯೂಬ್ ಲೈಟ್ ಚಿತ್ರ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ ಪಾತ್ರದ ಎಮೋಜಿ ಸೃಷ್ಟಿ ಮಾಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಕುತ್ತಿಗೆಗೆ ಎರಡು ಶೂಗಳನ್ನು ಹಾಕಿಕೊಂಡು ಸಲಾಂ ಮಾಡುತ್ತಿರುವ ಚಿತ್ರ ಇದೀಗ ಎಮೋಜಿ ಆಗಿ ರೂಪುಗೊಂಡಿದೆ. ಆ ಮೂಲಕ ನಟ ಸಲ್ಮಾನ್ ಖಾನ್ ತಮ್ಮದೇ ಪಾತ್ರ ಎಮೋಜಿ ಆಗಿ ರೂಪುಗೊಂಡ ಮೊದಲ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಏಕ್ ಥಾ ಟೈಗರ್, ಭಜರಂಗಿ ಭಾಯ್ ಜಾನ್ ಚಿತ್ರ ಖ್ಯಾತಿಯ ಕಬೀರ್ ಖಾನ್ ಟ್ಯೂಬ್ ಲೈಟ್ ಚಿತ್ರವನ್ನು ನಿರ್ದೇಶಿಸಿದ್ದು, ಸ್ವತಃ ಕಬೀರ್ ಖಾನ್ ಅವರು ಎಮೋಜಿ ಕುರಿತ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ