ಬಿಗ್ ಬೀ ಈ ವರ್ಷ ದೀಪಾವಳಿ, 75 ನೇ ಹುಟ್ಟುಹಬ್ಬ ಆಚರಿಸುವುದಿಲ್ಲವಂತೆ

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ತಮ್ಮ 75 ನೇ ಹುಟ್ಟುಹಬ್ಬ ಹಾಗೂ ದೀಪಾವಳಿ ಹಬ್ಬವನ್ನು ಈ ವರ್ಷ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ಮುಂಬೈ: ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ತಮ್ಮ 75 ನೇ ಹುಟ್ಟುಹಬ್ಬ ಹಾಗೂ ದೀಪಾವಳಿ ಹಬ್ಬವನ್ನು ಈ ವರ್ಷ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ. 
ಅ.11 ರಂದು ದೀಪಾವಳಿ ಹಬ್ಬ ಬಂದಿದ್ದು, ಅದೇ ದಿನ ಬಿಗ್ ಬೀ ಜನ್ಮದಿನವೂ ಆಗಿದೆ. ಹುಟ್ಟುಹಬ್ಬ ಹಾಗೂ ದೀಪಾವಳಿ ಆಚರಣೆ ಮಾಡದೇ ಇರುವುದಕ್ಕೆ ಬಿಗ್ ಬೀ ಕಾರಣವನ್ನು ನೀಡಿಲ್ಲವಾದರೂ, ಬಿಗ್ ಬೀ ಸೊಸೆ ಐಶ್ವರಾ ರೈ ಅವರ ತಂದೆ ಈ ವರ್ಷ ಅನಾರೋಗ್ಯದಿಂದ ನಿಧನರಾಗಿದ್ದು ಕಾರಣವಿರಬಹುದು ಎಂದು ಊಹಿಸಲಾಗುತ್ತಿದೆ. 
ನಿಮ್ಮ ಮಾಹಿತಿಗಾಗಿ... ನಾನು ಈ ವರ್ಷ ದೀಪಾವಳಿ, ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ ಎಂದಷ್ಟೇ ಟ್ವಿಟರ್ ನಲ್ಲಿ ಅಮಿತಾಬ್ ಬಚ್ಚನ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com