2018ರ ಆಸ್ಕರ್ ಪ್ರಶಸ್ತಿ ರೇಸ್ ಗೆ ಭಾರತದ 'ನ್ಯೂಟನ್' ಅಧಿಕೃತ ಆಯ್ಕೆ!

2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅಮಿತ್ ವಿ.ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.
ನ್ಯೂಟನ್ ಚಿತ್ರದ ಪೋಸ್ಟರ್ ಹಾಗೂ ಆಸ್ಕರ್ ಪ್ರಶಸ್ತಿ
ನ್ಯೂಟನ್ ಚಿತ್ರದ ಪೋಸ್ಟರ್ ಹಾಗೂ ಆಸ್ಕರ್ ಪ್ರಶಸ್ತಿ
Updated on
ಮುಂಬೈ: 2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅಮಿತ್ ವಿ.ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.
ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಂಬಂಧ ಶುಕ್ರವಾರ ನಡೆದ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಭೆಯಲ್ಲಿ ಸದಸ್ಯರು ನ್ಯೂಟನ್ ಚಿತ್ರವನ್ನು ಅವಿರೋಧವಾಗಿ ಆಯ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಿತ್  ವಿ.ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಹಿಂದಿ ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ ಎಂದು ಫೆಡರೇಷನ್ ನ ಅಧ್ಯಕ್ಷ ಹಾಗೂ ಖ್ಯಾತ ತೆಲುಗು ಚಿತ್ರ  ನಿರ್ಮಾಪಕ ಸಿವಿ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನ್ಯೂಟನ್ ಚಿತ್ರ ಅಧಿಕೃತವಾಗಿ ಭಾರತದಲ್ಲಿ ಇಂದು ತೆರೆಕಂಡಿದ್ದು, ಚಿತ್ರವು ಸಾಮಾಜಿಕ ಜಾಗೃತಿಯ ಉದ್ದೇಶವಿರುವ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆ. ಚಿತ್ರದಲ್ಲಿ 'ನೀವು ಬದಲಾಗದೆ ಇದ್ದಲ್ಲಿ, ಯಾವುದೂ ಬದಲಾಗದು'  ಎಂಬ ಸಂದೇಶ ಸಾರಲಾಗಿದ್ದು, ಚಿತ್ರದ ಕಥಾನಾಯಕ ನ್ಯೂಟನ್ (ರಾಜ್ ಕುಮಾರ್), ಆದರ್ಶಗಳಲ್ಲಿ ನಂಬಿಕೆಯಿಟ್ಟ ವ್ಯಕ್ತಿ.ಯಾಗಿರುತ್ತಾನೆ. ನಕ್ಸಲೀಯರ ಪ್ರಾಬಲ್ಯದ ಪ್ರದೇಶಗಳಲ್ಲಿ ಆತ ಚುನಾವಣಾ ಕರ್ತವ್ಯಕ್ತೆ ತೆರಳಿದಾಗ  ಉಂಟಾಗುವ ಘಟನಾವಳಿಗಳನ್ನು ಚಿತ್ರದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ತೋರಿಸಲಾಗಿದೆಯಂತೆ.

ನಕ್ಸಲರ ಬೆದರಿಕೆಯಿಂದಾಗಿ, ಜೀವಭಯದಿಂದ ಮತದಾನದಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು, ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲಾಗದೆ ಅನುಭವಿಸುವ ತುಮುಲವನ್ನು ಈ ಚಿತ್ರದಲ್ಲಿ ಮಾರ್ಮಿಕವಾಗಿ ಬಿಂಬಿಸಲಾಗಿದೆ ಎಂದು  ಚಿತ್ರತಂಡ ಹೇಳಿಕೊಂಡಿದೆ. ನ್ಯೂಟನ್ ಚಿತ್ರವು ಮತದಾನ ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸದ ವ್ಯಕ್ತಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಲಿದೆಯೆಂದು ನಾಯಕನಟ ರಾಜ್ ಕುಮಾರ್ ರಾವ್ ಹೇಳಿಕೊಂಡಿದ್ದಾರೆ. ನ್ಯೂಟನ್  ಚಿತ್ರದ ಟ್ರೇಲರ್ ಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com