ಲಕ್ಷಾಂತರ ಜನರಿಗೆ ನೀವು ಸ್ಫೂರ್ತಿ; ಸಲ್ಮಾನ್ ಖಾನ್ ರನ್ನು ಹಾಡಿ ಹೊಗಳಿದ ಸಚಿವ ಕಿರಣ್ ರಿಜಿಜು

ತಮ್ಮ ಅನಿಯಮಿತ ಕೆಲಸ ಮತ್ತು ಬ್ಯುಸಿ ಜೀವನದ ಮಧ್ಯೆ ಬಾಲಿವುಡ್ ನಟ ಸಲ್ಮಾನ್ ಖಾನ್ ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ತಮ್ಮ ಅನಿಯಮಿತ ಕೆಲಸ ಮತ್ತು ಬ್ಯುಸಿ ಜೀವನದ ಮಧ್ಯೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಮ್ ಫಿಟ್ ತೊ ಇಂಡಿಯಾ ಫಿಟ್ ಎಂಬ ಫಿಟ್ ನೆಸ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದಾರೆ.

ಇಂದು ಚಾಲೆಂಜನ್ನು ಸ್ವೀಕರಿಸಿದ ಸಲ್ಮಾನ್ ಖಾನ್ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ.
ಇದಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿ, ತಮ್ಮ ಚಾಲೆಂಜ್ ನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ ಹೇಳಿರುವುದು ಮಾತ್ರವಲ್ಲದೆ ಅವರನ್ನು ಹೊಗಳಿದ್ದಾರೆ ಕೂಡ.

ಸಲ್ಮಾನ್ ಖಾನ್ ಅವರೇ ನೀವು ಗ್ರೇಟ್, ನೀವು ಲಕ್ಷಾಂತರ ಜನರಿಗೆ ಸದೃಢವಾಗಿರಲು ಮತ್ತು ಆರೋಗ್ಯವಾಗಿರಲು ಸ್ಪೂರ್ತಿಯಾಗಿದ್ದೀರಿ. ನನ್ನ ಚಾಲೆಂಜನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

25 ಸೆಕೆಂಡುಗಳ ವಿಡಿಯೊ ಶೇರ್ ಮಾಡಿರುವ ಸಲ್ಮಾನ್ ಖಾನ್, ಅದರಲ್ಲಿ ದೇಹವನ್ನು ಹುರಿಗೊಳಿಸುವುದು, ವ್ಯಾಯಾಮ ಮಾಡುವುದು ಮತ್ತು ಸೈಕ್ಲಿಂಗ್ ಮಾಡುತ್ತಿದ್ದಾರೆ. ಕ್ರೀಡಾ ಸಚಿವರ ಈ ಚಾಲೆಂಜ್ ಅದ್ಭುತವಾಗಿದ್ದು ನಾನು ಕಿರಣ್ ಅವರ ಚಾಲೆಂಜ್ ಸ್ವೀಕರಿಸುತ್ತೇನೆ ಎಂದು ವಿಡಿಯೊ ಹಂಚಿಕೊಂಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರು ಆರಂಭಿಸಿರುವ ಹಮ್ ಫಿಟ್ ಹೆ ತೊ ಇಂಡಿಯಾ ಫಿಟ್ ಚಾಲೆಂಜನ್ನು ಬಾಲಿವುಡ್ ನಟ, ನಟಿಯರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಸ್ವೀಕರಿಸಿ ವಿಡಿಯೊ ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com