ಅನುಷ್ಕಾ ಮತ್ತು ಅವರ ಪತಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಂಡನ್ ನ ಭಾರತೀಯ ಹೈಕಮಿಷನರ್ ಕಛೇರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಏರ್ಪಡಿಸಿದ್ದ ವಿಶೇಷ ಔತಣ ಕೂಟದಲ್ಲಿ ಭಾಗವಹಿಸಿ ಆ ಸಂದರ್ಭ ತೆಗೆಯಲಾದ ಗ್ರೂಪ್ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಭಾವಚಿತ್ರವನ್ನು ಹಂಚಿಕೊಂಡಿತ್ತು. ಇದು ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಈಡಾಗಿದು ನೆಟ್ಟಿಗರು ಬಿಸಿಸಿಐ ಇಬ್ಬಗೆ ನೀತಿ ವಿರುಧ ಕಿಡಿಕಾರಿದ್ದರು.