ಕೊಹ್ಲಿ-ಶಾರೂಖ್-ಅನುಷ್ಕಾ
ಬಾಲಿವುಡ್
ಝಿರೋ ಚಿತ್ರದಲ್ಲಿ ಅನುಷ್ಕಾ ನಟನೆ ಹೊಗಳಿ ಟ್ರೋಲ್‌ಗೆ ಗುರಿಯಾದ ವಿರಾಟ್ ಕೊಹ್ಲಿ!
ಬಾಲಿವುಡ್ ನಟ ಶಾರೂಖ್ ಖಾನ್ ಅನುಷ್ಕಾ ನಟನೆಯ ಝಿಯೋ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಪ್ರದರ್ಶನ ಕಾಣುತ್ತಿದ್ದು ಈ ಮಧ್ಯೆ ಪತ್ನಿ ಅನುಷ್ಕಾ ಶರ್ಮಾ...
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಅನುಷ್ಕಾ ನಟನೆಯ ಝಿಯೋ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಪ್ರದರ್ಶನ ಕಾಣುತ್ತಿದ್ದು ಈ ಮಧ್ಯೆ ಪತ್ನಿ ಅನುಷ್ಕಾ ಶರ್ಮಾ ನಟನೆಯನ್ನು ಹೊಗಳಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಟ್ವೀಟರಿಗರು ಟ್ರೋಲ್ ಮಾಡಿದ್ದಾರೆ.
ಝಿರೋ ಚಿತ್ರದ ಕುರಿತಂತೆ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿದ್ದು ದಿನೇ ದಿನೇ ಝಿರೋ ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಕುಸಿಯುತ್ತಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ಹೊಗಳುತ್ತಿರುವ ಟ್ವೀಟರಿಗರು ಕೆಜಿಎಫ್ ಮುಂದೆ ಝೀರೋ ಆಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮಧ್ಯೆ ಕೊಹ್ಲಿ ಪತ್ನಿಯ ನಟನೆ ಮತ್ತು ಚಿತ್ರದ ಬಗ್ಗೆ ಮನಸೋ ಇಚ್ಛೆ ಹೊಗಳಿದ್ದು ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಝಿರೋ ಚಿತ್ರವನ್ನು ವೀಕ್ಷಿಸಿದೆ. ಮನರಂಜನೆಯ ಚಿತ್ರ. ತುಂಬ ಇಷ್ಟವಾಯಿತು. ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅನುಷ್ಕಾ ಶರ್ಮಾ ನಟನೆ ತುಂಬಾ ಇಷ್ಟವಾಯಿತು. ಏಕೆಂದರೆ ನನಗನಿಸಿದ್ದು ಅದು ತುಂಬಾ ಸವಾಲಿನ ಪಾತ್ರವೆಂದು. ಅನುಷ್ಕಾರದ್ದು ಔಟ್ ಸ್ಟಾಂಡಿಂಗ್ ಪ್ರದರ್ಶನ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಟ್ರೋಲಿಗರು ಪತ್ನಿಯನ್ನು ಹೊಗಳುತ್ತಿರುವ ಅಮ್ಮವರ ಗಂಡ ಎಂಬ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಸುಳ್ಳು ಹೇಳುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
Sir, please money waste mot korwau.
Bhavi ka acting awesome tha.
But movie 3rd class
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ