ಬಾಲಿವುಡ್

ಅಪ್ರಾಪ್ತೆಗೆ 'ಅನುಚಿತವಾಗಿ' ಕಿಸ್ ಮಾಡಿದ ಆರೋಪ: ಟಿವಿ ಶೋ ಗಳಲ್ಲಿ ಪಾಲ್ಗೊಳ್ಳದಿರಲು ಪಪೂನ್ ನಿರ್ಧಾರ

ಅಪ್ರಾಪ್ತೆಗೆ 'ಅನುಚಿತವಾಗಿ' ಕಿಸ್ ಮಾಡಿದ ಆರೋಪ:  ಟಿವಿ ಶೋ ಗಳಲ್ಲಿ ಪಾಲ್ಗೊಳ್ಳದಿರಲು ಪಪೂನ್ ನಿರ್ಧಾರ
ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ಚಿತ್ರ
Published On :

ಅಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ವಿವಾದ ಬಗೆಹರಿಯುವವರೆಗೂ ಟಿವಿ ಶೋಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

 ಹಿಂದಿ ಗಾಯನ ರಿಯಾಲಿಟಿ ಶೋ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಸ್ಪರ್ಧಿಗಳಲ್ಲಿ ಒಬ್ಬಳಾಗಿದ್ದ ಬಾಲಕಿಗೆ ಪಾಪೊನ್ ಕಿಸ್ ಮಾಡಿದ್ದಾನೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ವಕೀಲ ರುನಾ ಭಯುನ್ ಅವರು  ಪೋಸ್ಕೋ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ಅಲ್ಲದೇ ರಾಷ್ಟ್ರೀಯ ಮಕ್ಕಳ ಸಂರಕ್ಷಣೆ ಆಯೋಗಕ್ಕೂ ದೂರು ಸಲ್ಲಿಸಿದ್ದರು

ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಅಂಗರಗ್ ಪಪೊನ್, ಇಂತಹ ಕೃತ್ಯಗಳನ್ನು  ನಾನು ಮಾಡೋದಿಲ್ಲ,ತಮ್ಮ ಕೆಲಸದ ಬಗ್ಗೆ ಅಪಾರ ಗೌರವವಿದೆ.ಆದರೂ ಈ ವಿವಾದ ಬಗೆಹರಿಯುವ ವರೆಗೂ ಟಿವಿ ಶೋಗಳಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿತಿಳಿಸಿದ್ದಾರೆ.

 ಕಾನೂನಿನ ಬಗ್ಗೆ ನಂಬಿಕೆ ಹೊಂದಿದ್ದು, ಶೋ ಅರ್ಥಮಾಡಿಕೊಂಡು ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.