ವಿವಾದಗಳ ಬಳಿಕ ಅಂತಿಮವಾಗಿ 'ಪದ್ಮಾವತ್' ಬಿಡುಗಡೆ ದಿನಾಂಕ ಪ್ರಕಟ

ಕರ್ಣಿಸೇನಾ, ರಾಜಪೂತ ರಾಜವಂಶಸ್ಥರ ಪ್ರತಿಭಟನೆ, ವಿರೋಧದ ಹೊರತಾಗಿಯೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕರ್ಣಿಸೇನಾ, ರಾಜಪೂತ ರಾಜವಂಶಸ್ಥರ ಪ್ರತಿಭಟನೆ, ವಿರೋಧದ ಹೊರತಾಗಿಯೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ಬಿಡುಗಡೆ  ದಿನಾಂಕ ಪ್ರಕಟವಾಗಿದೆ.
ಇದೇ ಜನವರಿ 25ರಂದು ಈ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗುತ್ತಿದ್ದು, ಅದೇ ದಿನ ಬಿಡುಗಡೆಯಾಗುತ್ತಿರುವ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮನ್ ಚಿತ್ರಕ್ಕೆ ಸ್ಪರ್ಧೆ ಒಡ್ಡಲಿದೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ  ಮಾಡಿದ್ದು, 'ಶುಕ್ರವಾರ ಸಿಬಿಎಫ್ ಸಿ ಪದ್ಮಾವತ್ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. 2 ಗಂಟೆ 43 ನಿಮಿಷಗಳ ಚಿತ್ರದ ಅವಧಿಗೆ ಒಪ್ಪಿಗೆ ಸೂಚಿಸಲಾಗಿದೆ' ಎಂದು ವರದಿ ಮಾಡಿದೆ.
ಭಾರೀ ವಿವಾದ ಸೃಷ್ಟಿಸಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ ಖ್ಯಾತ ರಜಪೂತ ವಂಶದ ರಾಣಿ ಪದ್ಮಾವತಿ ಅವರ ಕುರಿತಾದ ಚಿತ್ರವಾಗಿದೆ ಎಂದು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿರುವ ಕ್ಷತ್ರಿಯ ಕರ್ಣಿ ಸೇನಾ  ಆರೋಪಿಸಿದ್ದು, ಇದೇ ಆರೋಪವನ್ನು ರಜಪೂತ ರಾಜವಂಶಸ್ಥರೂ ಕೂಡ ಆರೋಪಿಸಿದ್ದಾರೆ. ಚಿತ್ರದಲ್ಲಿ ರಾಣಿ ಪದ್ಮಾವತಿ ದೇವಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು, ಅವರ ಚಾರಿತ್ರ್ಯ ಹರಣಕ್ಕೆ ಯತ್ನಿಸಲಾಗಿದೆ ಎಂದು  ಆರೋಪಿಸಲಾಗಿದೆ.
ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ನಡೆಸಿದ್ದ ಸಿಬಿಎಫ್ ಸಿ ಚಿತ್ರದ ಟೈಟಲ್ ಬದಲಿಸುವಂತೆ ಹೇಳಿ 21ಕ್ಕೂ ಹೆಚ್ಚು ಕಟ್ ಗಳನ್ನು ಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com