ಸಿನಿಮಾ ಬಗ್ಗೆ ಅಮಿತಾಬ್ ಬಚ್ಚನ್ ಟ್ವೀಟ್, ಪದ್ಮಾವತ್ ಚಿತ್ರದ ಕುರಿತು ಆಗಿರಬಹುದೇ?

ಪದ್ಮಾವತ್ ಚಿತ್ರದ ವಿವಾದ ಆರಂಭವಾಗಿ ಹಲವು ತಿಂಗಳುಗಳೇ ನಡೆದು ....
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on: 
ನವದೆಹಲಿ: ಪದ್ಮಾವತ್ ಚಿತ್ರದ ವಿವಾದ ಆರಂಭವಾಗಿ ಹಲವು ತಿಂಗಳುಗಳೇ ನಡೆದು ಹೋಗಿವೆ. ಈ ಬಗ್ಗೆ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿರಲಿಲ್ಲ.
ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಕತ್ತಲೆಯ ಸಿನಿಮಾ ಕೋಣೆಯೊಳಗೆ ಕುಳಿತು ಸಿನಿಮಾ ನೋಡುವಾಗ ನಮ್ಮ ಪಕ್ಕದಲ್ಲಿ ಕುಳಿತವರ ಜಾತಿ, ಮತ, ಬಣ್ಣ, ಧರ್ಮ ಯಾವುದೆಂದು ಕೇಳುವುದಿಲ್ಲ. ಆದರೂ ಕೂಡ ನಾವು ಒಂದೇ ಸಿನಿಮಾ ಒಟ್ಟಿಗೆ ಕುಳಿತು ನೋಡಿ ಹಾಸ್ಯಕ್ಕೆ ನಗುತ್ತೇವೆ, ಭಾವನೆಗಳಿಗೆ ಅಳುತ್ತೇವೆ, ಹಾಡು ಬಂದಾಗ ಒಟ್ಟಿಗೆ ಹಾಡುತ್ತೇವೆ. ವಿಭಜಿತ ಜಗತ್ತಿನಲ್ಲಿ ಸಿನಿಮಾ ಎಲ್ಲರನ್ನೂ ಒಂದು ಮಾಡುತ್ತದೆ ಎಂದು ಅರ್ಥಗರ್ಭಿತವಾಗಿ ಬರೆದಿದ್ದಾರೆ.
ಇಲ್ಲಿ ಯಾವ ಸಿನಿಮಾದ ಹೆಸರನ್ನೂ ನಿರ್ದಿಷ್ಟವಾಗಿ ಬಚ್ಚನ್ ನಮೂದಿಸದಿದ್ದರೂ ಕೂಡ ಪದ್ಮಾವತ್ ಚಿತ್ರಕ್ಕೆ ಹೋಲಿಸಬಹುದು ಎಂಬುದು ಜನರ ಅಭಿಪ್ರಾಯ. ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ ಚಿತ್ರಕ್ಕೆ ರಾಷ್ಟಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಚಿತ್ರವನ್ನು ನಿಷೇಧಿಸಬೇಕೆಂದು ಕೂಡ ಹೋರಾಟಗಳು ನಡೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com