2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ, ನ್ಯೂಟನ್ ಗೆ ಸಿಂಹಪಾಲು!

2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿ ನಾಮನಿರ್ದೇಶನವಾಗಿದ್ದು, ಈ ಹಿಂದೆ ಆಸ್ಕರ್ ರೇಸ್ ನಲ್ಲಿದ್ದ ಏಕೈಕ ಭಾರತೀಯ ಸಿನಿಮಾ ಎಂಬ ಹಿರಿಮೆ ಪಡೆದಿದ್ದ ರಾಜ್ ಕುಮಾರ್ ರಾವ್ ಅವರ ನ್ಯೂಟನ್ ಚಿತ್ರ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆದಿದೆ.
ನ್ಯೂಟನ್ ಚಿತ್ರ
ನ್ಯೂಟನ್ ಚಿತ್ರ
ಮುಂಬೈ: 2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿ ನಾಮನಿರ್ದೇಶನವಾಗಿದ್ದು, ಈ ಹಿಂದೆ ಆಸ್ಕರ್ ರೇಸ್ ನಲ್ಲಿದ್ದ ಏಕೈಕ ಭಾರತೀಯ ಸಿನಿಮಾ ಎಂಬ ಹಿರಿಮೆ ಪಡೆದಿದ್ದ ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಚಿತ್ರ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆಯುವ ಸಾಧ್ಯತೆ ಇದೆ. 
ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ವಿಭಾಗದಲ್ಲಿ ನ್ಯೂಟನ್ ಗೆ ಪ್ರಶಸ್ತಿ ಲಭಿಸಲಿದೆ. ಆಸ್ಕರ್ ನಲ್ಲಿ ನಿರಾಸೆ ಕಂಡಿದ್ದ ಚಿತ್ರಕ್ಕೆ ಇದೀಗ ಪ್ರಶಸ್ತಿಗಳ ಮಹಾಪೂರವೇ ಹರಿದುಬರುವ ಸಾಧ್ಯತೆ ಇದೆ. ಇನ್ನು ಅತ್ಯುತ್ತಮ ಪೋಷಕ  ನಟ ವಿಭಾಗದಲ್ಲಿ ನಟ ಪಂಕಜ್ ತ್ರಿಪಾಠಿ ಪ್ರಶಸ್ತಿ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. 
ಇನ್ನು ಅತ್ಯುತ್ತಮ ನಾಯಕನಟ ವಿಭಾಗದಲ್ಲಿ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಕಹಾನಿ ಚಿತ್ರಕ್ಕಾಗಿ ನಟ ಅಕ್ಷಯ್ ಕುಮಾರ್, ಸಾವ್ ಧಾನ್ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ, ಕಾಬಿಲ್ ಚಿತ್ರಕ್ಕಾಗಿ ಹೃತಿಕ್ ರೋಷನ್, ಹಿಂದಿ  ಮೀಡಿಯಂ ಚಿತ್ರಕ್ಕಾಗಿ ಇರ್ಫಾನ್ ಖಾನ್, ರಾಯೀಸ್ ಚಿತ್ರಕ್ಕಾಗಿ ಶಾರುಖ್ ಖಾನ್, ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರಕ್ಕಾಗಿ ವರುಣ್ ಧವನ್ ಪ್ರಶಸ್ತಿ ರೇಸ್ ನಲ್ಲಿದ್ದಾರೆ.
ಇದೇ ಜನವರಿ 20 ಅಂದರೆ ನಾಳೆ ಮುಂಬೈನಲ್ಲಿ ವಿದ್ಯುಕ್ತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ನಾಳೆ ಅಂತಿಮ ಹೆಸರುಗಳು ಅಧಿಕೃತವಾಗಿ ಘೋಷಣೆಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com