ಮುಂಬೈ: ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಆರಂಭವಾಗುತ್ತಿದ್ದು ವೆಬ್ ಸಿರೀಸ್ ಗೆ ಕರಣ್ ಜಿತ್ ಕೌರ್ ಎಂದು ಶೀರ್ಷಿಕೆ ಇಡಲಾಗಿದೆ.
ಸನ್ನಿ ಲಿಯೋನ್ ಕೆನಾಡದಿಂದ ಭಾರತಕ್ಕೆ ಬಂದಿದ್ದು ಯಾಕೆ?. ಸನ್ನಿ ಎಂದು ಹೆಸರು ಬದಲಿಸಿಕೊಂಡಿದ್ದು ಯಾಕೆ ಎಂಬ ಅನೇಕ ವಿಚಾರಗಳಿಗೆ ಈ ವೆಬ್ ಸಿರೀಸ್ ನಲ್ಲಿ ಉತ್ತರ ದೊರೆಯಲಿದೆ. ಇನ್ನು ಸನ್ನಿ ಪಾತ್ರದಲ್ಲಿ ಸನ್ನಿ ಲಿಯೋನ್ ಅವರೇ ನಿರ್ವಹಿಸಲಿದ್ದಾರೆ.
ಈ ವೆಬ್ ಸಿರೀಸ್ ನಲ್ಲಿ ಸನ್ನಿ ಪತಿ ಪಾತ್ರವನ್ನು ನಿಜವಾದ ಗಂಡ ಡೇನಿಯಲ್ ವೇಬರ್ ನಿರ್ವಹಿಸದೇ ದಕ್ಷಿಣ ಆಫ್ರಿಕಾದ ನಟ ಮಾರ್ಕ ಬೂಕ್ನರ್ ನಿರ್ವಹಿಸುತ್ತಿದ್ದಾರೆ.