ನ್ಯೂಯಾರ್ಕ್(ಅಮೆರಿಕ): ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಇಸಂಟ್ ಇಟ್ ರೊಮ್ಯಾಂಟಿಕ್ ಚಿತ್ರದ ಭಾಗವಾಗಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ ಬೀದಿಗಳಲ್ಲಿ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಇಸಂಟ್ ಇಟ್ ರೊಮ್ಯಾಂಟಿಕ್ ಚಿತ್ರ ಹಾಸ್ಯ ಪ್ರಧಾನ ಚಿತ್ರವಾಗಿದ್ದು ಈ ಚಿತ್ರದಲ್ಲಿ ರೆಬೆಲ್ ವಿಲ್ಸನ್, ಆಡಮ್ ಡೀವೈನ್, ಲಿಯಮ್ ಹಮ್ಸ್ ವರ್ತ್ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರವನ್ನು ಟಾಡ್ ಸ್ಟ್ರಾಸ್ ಶುಲ್ಸನ್ ನಿರ್ದೇಶನ ಮಾಡಿದ್ದಾರೆ.
ಪ್ರೀತಿಯನ್ನು ನಂಬದಿರುವ ಯುವತಿಯ ಜೀವನವನ್ನು ಕಾಮಿಡಿಯ ಮೂಲಕ ರೊಮ್ಯಾಂಟಿಕ್ ಆಗಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಇಸಾಬೆಲ್ಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಲಾಬಿ ಬಣ್ಣದ ಸಿಲ್ಟ್ ಉಡುಪಿನಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ.