ಕಟು ಟೀಕೆಗಳ ನಡುವೆಯೇ ದಾಖಲೆ ಬರೆದ ಅಮೀರ್ ಖಾನ್, ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಬಹು ನಿರೀಕ್ಷಿತ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಅಂತೆಯೇ ತನ್ನ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ನೂತನ ದಾಖಲೆ ಬರೆದಿದ್ದು, ಬಾಹುಬಲಿ2 ದಾಖಲೆಯನ್ನು ಅಳಿಸಿ ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಅಂತೆಯೇ ತನ್ನ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ನೂತನ ದಾಖಲೆ ಬರೆದಿದ್ದು, ಬಾಹುಬಲಿ2 ದಾಖಲೆಯನ್ನು ಅಳಿಸಿ ಹಾಕಿದೆ.
ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ, ಅಮಿತಾಭ್ ಬಚ್ಚನ್, ಆಮೀರ್ ಖಾನ್ ನಟನೆಯ ‘ಥಗ್ಸ್ ಆಫ್ ಹಿಂದುಸ್ಥಾನ್’ ಚಿತ್ರ ಗುರುವಾರ ಜಗತ್ತಿನಾದ್ಯಂತ 7000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ತೆರೆಕಂಡಿದೆ. ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಬರೋಬ್ಬರಿ 50 ಕೋಟಿ ರೂ. ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದೆ!
ವಿಮರ್ಶಕರ ದೃಷ್ಟಿಯಿಂದ ಋಣಾತ್ಮಕ ಅಭಿಪ್ರಾಯ ಪಡೆದುಕೊಂಡಿದ್ದ ಚಿತ್ರ, ಗಳಿಕೆ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದೆ. ಅಷ್ಟೇ ಅಲ್ಲ, ಈ ಹಿಂದಿನ ಮೊದಲ ದಿನದ ಗಳಿಕೆಯ ಹಲವು ದಾಖಲೆಗಳನ್ನು ‘ಥಗ್ಸ್..’ ಮುರಿದಿದೆ. ಸಲ್ಮಾನ್ ಖಾನ್ ನಟಿಸಿದ್ದ ‘ಪ್ರೇಮ ರತನ್ ಧನ್ ಪಾಯೋ’ ಚಿತ್ರ 39. 32 ಕೋಟಿ ರೂ. ಗಳಿಕೆ ಮಾಡಿತ್ತು. ‘ಬಾಹುಬಲಿ-2’ 40.73 ಕೋಟಿ ರೂ. ಬಾಚಿಕೊಂಡಿತ್ತು. ಇದೀಗ ಈ ಎರಡೂ ಚಿತ್ರಗಳನ್ನು ಮೀರಿ ನಿಂತಿದೆ ‘ಥಗ್ಸ್..’. ‘ಬಾಹುಬಲಿ 2’ ಮತ್ತು ಹಾಲಿವುಡ್​ನ ‘ಅವೆಂಜರ್ಸ್- ಇನ್ಫಿನಿಟಿ ವಾರ್’ ಸಿನಿಮಾಗಳು ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕವೇ ದಾಖಲೆ ಮಾಡಿದ್ದವು. ಇದೀಗ ಆ ಪೈಕಿ ಮೂರನೇ ಚಿತ್ರವಾಗಿ ‘ಥಗ್ಸ್..’ ಸೇರ್ಪಡೆಗೊಂಡಿದೆ. ಮುಂಗಡ ಟಿಕೆಟ್​ನಿಂದಲೇ 27 ಕೋಟಿ ರೂ. ಗಳನ್ನು ‘ಥಗ್ಸ್..’ ಚಿತ್ರ ಗಳಿಸಿದೆ.
ಒಟ್ಟಾರೆ ಅಮೀರ್ ಖಾನ್ ಚಿತ್ರ ಮೊದಲ ದಿನವೇ ಒಟ್ಟಾರೆ 52.75 ಕೋಟಿ ಗಳಿಸಿದ್ದು, ಆ ಮೂಲಕ ಬಾಲಿವುಡ್ ನ ಈ ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ. ಆದರೆ 2 ಮತ್ತು 3 ದಿನದ ಹೊತ್ತಿಗೆ ಚಿತ್ರದ ಕಲೆಕ್ಷನ್ ಕುಂಠಿತಗೊಂಡಿದ್ದು, 3ನೇ ದಿನದ ಹೊತ್ತಿಗೆ 82 ಕೋಟಿ ರೂ.ಗಳಿಕೆ ಕಂಡಿದೆ.
ಚಿತ್ರಮಂದಿರಗಳಲ್ಲೂ ಗಣನೀಯ ಇಳಿಕೆ
ಇನ್ನು ಕಳೆದವಾರ ಗರಿಷ್ಠ ಅಂದರೆ ಸುಮಾರು 7500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಥಗ್ಸ್ ಆಫ್ ಹಿಂದೂಸ್ತಾನ ಚಿತ್ರ 3ನೇ ದಿನದ ಹೊತ್ತಿಗೆ ತನ್ನ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಸುಮಾರು 2500 ಸಾವಿರ ಸ್ಕ್ರೀನ್ ಗಳಿಂದ ಥಗ್ಸ್ ಗೇಟ್ ಪಾಸ್ ಪಡೆದಿದ್ದು, ಪ್ರಸ್ತುತ ಸುಮಾರು 5000 ಸ್ಕ್ರೀನ್ ಗಳಲ್ಲಿ ಮಾತ್ರ ಚಿತ್ರ ಪ್ರದರ್ಶನ ವಾಗುತ್ತಿದೆ. ಇದೂ ಕೂಡ ಚಿತ್ರದಗಳಿಕೆ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com