ಮುಂಬೈ: ಮಾಜಿ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ನಿಹಾರಿಕಾ ಸಿಂಗ್ ಇದೀಗ ಮೀಟೂ ಬಾಂಬ್ ಸಿಡಿಸಿದ್ದಾರೆ.
ಖ್ಯಾತ ಧ್ವನಿಸುರಳಿ ಸಂಸ್ಥೆಯಾದ ಟಿ ಸೀರಿಸ್ ನ ಮುಖ್ಯಸ್ಥ ಭೂಷಣ್ ಕುಮಾರ್ ತಮ್ಮೊಂದಿಗೆ ಡೇಟಿಂಗ್ ನಡೆಸುವಂತೆ ಕೋರಿದ್ದರು ಎಂದು ನಿಹಾರಿಕಾ ಸಿಂಗ್ ಹೇಳಿದ್ದಾರೆ.
ಇದೇ ವೇಳೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಅವರು ಅವಕಾಶವಾದಿಯಾಗಿದ್ದಾರೆ. ಇನ್ನು ನಿರ್ದೇಶಕ ಸಾಜಿದ್ ಖಾನ್ ಅವರು ನನ್ನೊಂದಿಗೆ ಸಹಕರಿಸದಿದ್ದರೆ ಬಾಲಿವುಡ್ ನಲ್ಲಿ ಒಂದು ದಿನವನ್ನೂ ಕಳೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.