ಸೋನಾಕ್ಷಿ ತಳ್ಳಿದ ರಭಸಕ್ಕೆ ಆಯಾತಪ್ಪಿ ಬಿದ್ದ ಅಕ್ಷಯ್ ಕುಮಾರ್! ವಿಡಿಯೋ ವೈರಲ್ 

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಳ್ಳಿದ ರಭಸಕ್ಕೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಯಾತಪ್ಪಿ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋನಾಕ್ಷಿ ತಳ್ಳಿದ ರಭಸಕ್ಕೆ ಆಯಾತಪ್ಪಿ ಬಿದ್ದ ಅಕ್ಷಯ್ ಕುಮಾರ್! ವಿಡಿಯೋ ವೈರಲ್ 
Updated on: 

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಳ್ಳಿದ ರಭಸಕ್ಕೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಯಾತಪ್ಪಿ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿಗೆ ಮಂಗಳ್ ಮಿಷನ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಈ  ಅವಘಡ ನಡೆದಿದೆ. ಸೋನಾಕ್ಷಿ ಸಿನ್ಹಾ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ತಾಪ್ಸಿ ಪಾನ್ನು, ವಿದ್ಯಾಬಾಲನ್, ನಿತ್ಯಮೆನನ್  ಮಧ್ಯೆ ಕುಳಿತು ಮಂಗಳ್ ಮಿಷನ್  ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅಕ್ಷಯ್ ಕುಮಾರ್ ಅವರನ್ನು ಪಕ್ಕದಲ್ಲಿಯೇ ಕುಳಿತಿದ್ದ ಸೋನಾಕ್ಷಿ ಸಿನ್ಹಾ ತಳ್ಳಿದ್ದಾರೆ. ಇದರಿಂದಾಗಿ ಕುರ್ಚಿಯ ಮೇಲೆ ಕುಳಿತಿದ್ದ ಅಕ್ಷಯ್ ಕುಮಾರ್ ಹಾಗೆಯೇ ಕೆಳಗೆ ಬಿದಿದ್ದಾರೆ.

 ಈ ವಿಡಿಯೋವನ್ನು ಸೋನಾಕ್ಷಿ ಸಿನ್ಹಾ ತಮ್ಮ ಇನ್ಸಾಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಅದು ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. 

ಅಕ್ಷಯ್ ಕುಮಾರ್, ತಾಪ್ಸಿ ಪಾನ್ನು, ವಿದ್ಯಾಬಾಲನ್, ನಿತ್ಯಮೆನನ್  , ಸೋನಾಕ್ಷಿ ಸಿನ್ಹಾ ಅಭಿಯನದ ಮಂಗಳ್ ಮಿಷನ್ ಚಿತ್ರ ಇದೇ ತಿಂಗಳ 15 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com