ಕಾಫಿಶಾಪ್‌ಗೆ ಬೇಡ, ರೂಂಗೆ ಹೋಗೋಣ ಅಂದ ತಮಿಳು ನಿರ್ಮಾಪಕನಿಗೆ ಚಳಿ ಬಿಡಿಸಿದ ವಿದ್ಯಾ ಬಾಲನ್!

ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಟಿ ವಿದ್ಯಾಬಾಲನ್ ಅವರ ಮಿಷನ್ ಮಂಗಲ್ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ತಮ್ಮ ವೃತ್ತಿಜೀವನದಲ್ಲಿ ಎದುರಾಗಿದ್ದ ಕೆಟ್ಟ ಪರಿಸ್ಥಿತಿಯ ಕುರಿತು ನಟಿ ಹೇಳಿಕೊಂಡಿದ್ದಾರೆ.
ವಿದ್ಯಾ ಬಾಲನ್
ವಿದ್ಯಾ ಬಾಲನ್
Updated on: 

ಮುಂಬೈ: ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಟಿ ವಿದ್ಯಾಬಾಲನ್ ಅವರ ಮಿಷನ್ ಮಂಗಲ್ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ತಮ್ಮ ವೃತ್ತಿಜೀವನದಲ್ಲಿ ಎದುರಾಗಿದ್ದ ಕೆಟ್ಟ ಪರಿಸ್ಥಿತಿಯ ಕುರಿತು ನಟಿ ಹೇಳಿಕೊಂಡಿದ್ದಾರೆ.

ವಿದ್ಯಾಬಾಲನ್ ಸಂದರ್ಶನವೊಂದರಲ್ಲಿ ತಾವು ಮೊದ ಮೊದಲು ಅನುಭವಿಸಿದ ಕೆಟ್ಟ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್ ನಿಂದಾಗಿ ನಾನು ಹಲವು ದೊಡ್ಡ ದೊಡ್ಡ ಚಿತ್ರಗಳನ್ನು ನಿರಾಕರಿಸಬೇಕಾಯಿತು ಎಂದರು. 

ಅಂದು ನಾನು ಚೆನ್ನೈನಲ್ಲಿದ್ದೆ. ಓರ್ವ ನಿರ್ದೇಶಕ ನನ್ನನ್ನು ಭೇಟಿ ಮಾಡಲು ಬಂದರು. ಆಗ ನಾನು ಕಾಫಿಶಾಪ್‌ನಲ್ಲಿ ಕುಳಿತು ಮಾತನಾಡೋಣ ಎಂದು ಹೇಳಿದೆ. ಅದಕ್ಕೆ ಅವರು ಬೇಡ ನಿಮ್ಮ ರೂಂಗೆ ಹೋಗೋಣ ಎಂದರು. ಅಲ್ಲದೆ ನನ್ನನ್ನು ಒತ್ತಾಯ ಮಾಡಿದರು. ನಾನು ಬಾಗಿಲನ್ನು ತೆರೆದು ಹೊರಡುವಂತೆ ಹೇಳಿದೆ. ನನ್ನನ್ನೇ ದಿಟ್ಟಿಸಿ ನೋಡಿ ಅಲ್ಲಿಂದ ಹೋದರು ಎಂದು ಹಿಂದಿನ ಕರಾಳತೆಯನ್ನು ವಿದ್ಯಾ ಬಿಚ್ಚಿಟ್ಟಿದ್ದಾರೆ.

 
 
 
 
 
 
 
 
 
 
 
 
 

‪A Fur-ry Happy 2017!! ‬

A post shared by Vidya Balan (@balanvidya) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com