ಐಸಿಯುನಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದನೆ-ಆಸ್ಪತ್ರೆ ಮೂಲಗಳು

ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್
Updated on

ಮುಂಬೈ: ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

ಕಳೆದ ವಾರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 90 ವರ್ಷದ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಲೂ ತುರ್ತು ನಿಗಾ ಘಟಕದಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಆಂತರಿಕ ಮೂಲಗಳು ಸ್ಪಷ್ಟಪಡಿಸಿವೆ.

ಭಾನುವಾರ ರಾತ್ರಿಯವರೆಗೂ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ, ಈಗಲೂ ವೆಂಟಿಲೇಟರ್ ನಲ್ಲಿಯೇ ಇದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಲತಾ ಮಂಗೇಶ್ಕರ್ ಅವರನ್ನು ಮನೆಗೆ  ಕರೆದುಕೊಂಡು ಹೋಗಲು ವೈದ್ಯರಿಗಾಗಿ ಕಾಯಲಾಗುತ್ತಿದೆ ಎಂದು ಅವರ ತಂಗಿ ಉಷಾ ಮಂಗೇಶ್ಕರ್ ತಿಳಿಸಿದ್ದಾರೆ. 

ಈಗಲೂ ಆಸ್ಪತ್ರೆಯಲ್ಲಿರುವ ಲತಾ ಮಂಗೇಶ್ಕರ್ ಚೆನ್ನಾಗಿದ್ದಾರೆ. ವೈದ್ಯರು ಹೇಳಿದ ನಂತರ ಮನೆಗೆ ಕರೆದುಕೊಂಡು ಹೋಗಲಾಗುವುದು ಎಂದು ಉಷಾ ಮಂಗೇಶ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com