ವಿಜಯದಶಮಿಗೆ ಕಿಚ್ಚ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್! ದಬಾಂಗ್-3  ಚಿತ್ರದ ವಿಲನ್ ಲುಕ್ ರಿವೀಲ್

ಬಾಲಿವುಡ್ ಖಾನ್ ತ್ರಯರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಮುಂಬರುವ ಚಿತ್ರ "ದಬಾಂಗ್-3" ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು ಮಂಗಳವಾರ, ವಿಜಯದಶಮಿ ಹಬ್ಬದ ದಿನ ಅವರ ಪಾತ್ರದ ಫಸ್ಟ್ ಲುಕ್ ಹೊರಬಂದಿದೆ.
ವಿಜಯದಶಮಿಗೆ ಕಿಚ್ಚ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ತ್! ದಬಾಂಗ್-3  ಚಿತ್ರದ ವಿಲನ್ ಲುಕ್ ರಿವೀಲ್
ವಿಜಯದಶಮಿಗೆ ಕಿಚ್ಚ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ತ್! ದಬಾಂಗ್-3 ಚಿತ್ರದ ವಿಲನ್ ಲುಕ್ ರಿವೀಲ್
Updated on: 

ಬಾಲಿವುಡ್ ಖಾನ್ ತ್ರಯರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಮುಂಬರುವ ಚಿತ್ರ "ದಬಾಂಗ್-3" ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು ಮಂಗಳವಾರ, ವಿಜಯದಶಮಿ ಹಬ್ಬದ ದಿನ ಅವರ ಪಾತ್ರದ ಫಸ್ಟ್ ಲುಕ್ ಹೊರಬಂದಿದೆ. ಸಲ್ಮಾನ್ ಖಾತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುದೀಪ್ ಅವರ ಈ ಪೋಸ್ಟರ್ ಹಂಚಿಕೊಂಡಿದ್ದಾರೆ.

"ವಿಲನ್ ಎಷ್ಟು ದೊಡ್ಡವನೋ ಅವನಿಗೆ ಟಕ್ಕರ್ ಕೊಡುವಾಗಿನ ಮಜವೇ ಬೇರೆ" ಎಂದ್ಯ್ಉ ಟ್ವಿಟ್ಟರ್ ನಲ್ಲಿ ಬರೆದುಕೊಂಡ ಸಲ್ಮಾನ್ ಕಿಚ್ಚ ಸುದೀಪ್ ಅವರ ಲುಕ್ ಹಂಚಿಕೊಂಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆಯಾಗಿ ಸುದೀಪ್ ಸಹ ಹರ್ಷವ್ಯಕ್ತಪಡಿಸಿದ್ದು ಸಲ್ಮಾ ಜತೆ ನಟಿಸುವ ಅವಕಾಶ ಸಿಕ್ಕಿದ್ದು ಹರ್ಷ ತಂದಿದೆ ಎಂದಿದ್ದಾರೆ.

ದಬಾಂಗ್-3 ಚಿತ್ರದಲ್ಲಿ ಸುದೀಪ್ ವಿಲ ಆಗಿ ಕಾಣಿಸಿಕೊಳ್ಳುತ್ತಿದ್ದು ಅವರ ಪ್ತ್ರದ ಹೆಸರು ಬಲ್ಲಿ ಎಂದಾಗಿದೆ. ಇಂದು ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಬೆಂಕಿ ನಡುವೆ ನಿಂತಿರುವ ಕಿಚ್ಚ ತನ್ನ ಕಿಲ್ಲಿಂಗ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com