ವಿವಾದಿತ ಟ್ವೀಟ್; ನಟ ವಿವೇಕ್ ಒಬೆರಾಯ್ ಗೆ ಮಹಿಳಾ ಆಯೋಗ ನೋಟಿಸ್

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ 'ಪಿಎಂ ನರೇಂದ್ರ ಮೋದಿ' ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

Published: 20th May 2019 12:00 PM  |   Last Updated: 20th May 2019 08:00 AM   |  A+A-


National Commission for Women issues notice to actor Vivek Oberoi demanding explanation over his tweet on exit polls

ಸಂಗ್ರಹ ಚಿತ್ರ

Posted By : SVN SVN
Source : Online Desk
ಮುಂಬೈ: ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ 'ಪಿಎಂ ನರೇಂದ್ರ ಮೋದಿ' ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ಬಹಿರಂಗವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗವಾದ ಬೆನ್ನಲ್ಲೇ ಪವನ್ ಸಿಂಗ್ ಎಂಬ ಟ್ವಿಟರ್ ಖಾತೆದಾರರು ಐಶ್ವರ್ಯಾ ರೈ ಬಚ್ಚನ್ ಅವರ ಈ ಹಿಂದಿನ ಸಂಬಂಧಗಳನ್ನು ಹಾಲಿ ರಾಜಕೀಯ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದರು. ಇದೇ ಫೋಟೋವನ್ನು ನಟ ವಿವೇಕ್ ಒಬೆರಾಯ್ ಕೂಡ ಟ್ವೀಟ್ ಮಾಡಿ.. ರಾಜಕೀಯ ಏನೂ ಇಲ್ಲ.. ಕೇವಲ ಜೀವನ... ಎಂದು ರಿಟ್ವೀಟ್ ಮಾಡಿದ್ದಾರೆ.

ವಿವೇಕ್ ಒಬೆರಾಯ್ ಅವರ ಈ ಟ್ವೀಟ್ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ರಾಜಕೀಯಕ್ಕಾಗಿ ಮಹಿಳೆಯೊಬ್ಬಳ ಖಾಸಗಿ ವಿಚಾರವನ್ನು ಸಾಮಾಜಿಕ ವೇದಿಕೆ ಮೇಲೆ ತಂದಿಟ್ಟ ವಿವೇಕ್ ಒಬೆರಾಯ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇ ವಿಚಾರ ಇದೀಗ ಕೇಂದ್ರ ಮಹಿಳಾ ಆಯೋಗದ ಗಮನವನ್ನೂ ಕೂಡ ಸೆಳೆದಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ನಟ ವಿವೇಕ್ ಒಬೆರಾಯ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಟ್ವೀಟ್ ಸಂಬಂಧ ವಿವರಣೆ ನೀಡುವಂತೆ ಸೂಚಿಸಿದೆ.
Stay up to date on all the latest ಬಾಲಿವುಡ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp