ಡೇಟಿಂಗ್ ನಡೆಸುತ್ತಿರುವುದು ನಿಜ, ಮಗು ಬೇಕೆಂದಾಗ ಮದುವೆ ಆಗ್ತೀನಿ: ತಾಪ್ಸಿ ಪನ್ನು

ಮಗು ಬೇಕು ಎನಿಸಿದಾಗ ಮಾತ್ರ ಮದುವೆ ಆಗುವುದಾಗಿ ಬಹುಭಾಷಾ ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

Published: 12th September 2019 02:24 PM  |   Last Updated: 12th September 2019 06:47 PM   |  A+A-


Taapsee Pannu

ತಾಪ್ಸಿ ಪನ್ನು

Posted By : Vishwanath S
Source : UNI

ಮುಂಬೈ: ಮಗು ಬೇಕು ಎನಿಸಿದಾಗ ಮಾತ್ರ ಮದುವೆ ಆಗುವುದಾಗಿ ಬಹುಭಾಷಾ ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

100%

ಇತ್ತೀಚೆಗೆಷ್ಟೇ ನಟಿ ತಾಪ್ಸಿ, ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶಕ ತಾಪ್ಸಿ ಅವರಿಗೆ, ತಾವು ಪ್ರಿಯಕರನ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅಲ್ಲಾ ಎಂದು ಪ್ರಶ್ನಿಸಿದ್ದರು.

100%

ಇದಕ್ಕೆ ಉತ್ತರಿಸಿದ ತಾಪ್ಸಿ, ''ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಗಾಸಿಪ್ ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸಕ್ತಿ ಹೊಂದಿರುವವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನನಗೆ ಇನ್ನೂ ಮದುವೆಯಾಗಿಲ್ಲ. ನನಗೆ ಮಕ್ಕಳು ಬೇಕು ಎಂದು ಎನ್ನಿಸಿದಾಗ ಮಾತ್ರ ನಾನು ಮದುವೆಯಾಗುತ್ತೇನೆ'' ಎಂದು ಹೇಳಿದ್ದಾರೆ.

100%

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp