ದೀಪಿಕಾ ಪಡುಕೋಣೆಗೆ ಸಲ್ಮಾನ್ ಖಾನ್ ಜೊತೆ ನಟಿಸುವಾಸೆ

ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ನಟಿ ದೀಪಿಕಾ ಪಡುಕೋಣೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ - ದೀಪಿಕಾ
ಸಲ್ಮಾನ್ ಖಾನ್ - ದೀಪಿಕಾ
Updated on: 

ಮುಂಬೈ: ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ನಟಿ ದೀಪಿಕಾ ಪಡುಕೋಣೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಸಲ್ಮಾನ್ ಹಾಗೂ ದೀಪಿಕಾ ಜೋಡಿಯಲ್ಲಿ ಯಾವುದೇ ಚಿತ್ರ ಹೊರಬಂದಿಲ್ಲ. ಸಲ್ಮಾನ್ ಜೊತೆಗೆ ತಮಗೆ ನಟಿಸುವ ಆಸೆ ಇದೆಯಾ ? ಎಂದು ದೀಪಿಕಾಗೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದೀಪಿಕಾ, ನನ್ನ ಅಭಿಮಾನಿಗಳು ಈ ವಿಚಾರದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ನಾನು ಸಲ್ಮಾನ್ ಒಟ್ಟಿಗೆ ಯಾವಾಗ ನಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ನನಗೂ ಸಹ ಸಲ್ಮಾನ್ ಖಾನ್ ಜೊತೆ ನಟಿಸುವ ಆಸೆ ಇದೆ. ಆದರೆ  ಸೂಕ್ತ ಚಿತ್ರಕತೆ ಸಿನಿಮಾ ಸಿಕ್ಕರೆ ಖಂಡಿತಾ ನಟಿಸುತ್ತೇವೆ. ನಾನು ‘ಹಮ್‌ ದಿಲ್‌ ದೆ ಚುಕೆ ಸನಮ್‌’ ಚಿತ್ರದ ದೊಡ್ಡ ಅಭಿಮಾನಿ. ಇತ್ತೀಚೆಗೆ ನನಗೆ ಯಾವತ್ತೂ ಅಂತಹ ಅವಕಾಶ ಬಂದಿಲ್ಲ, ಆದರೆ ಅವರ ಜೊತೆ ಸಿನಿಮಾ ಮಾಡಲು ನನಗಿಷ್ಟ’ ಎಂದು ಅವರು ಹೇಳಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆ ತಮ್ಮ ಬಹುನಿರೀಕ್ಷಿತ ಚಿತ್ರ ‘ಛಪಾಕ್‌’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಮೇಘನಾ ಗುಲ್ಜಾರ್‌ ನಿರ್ದೇಶನ ಮಾಡಿದ್ದು, ಇದರಲ್ಲಿ ವಿಕ್ರಮ್‌ ಮಸ್ಸೆ ನಟಿಸಿದ್ದಾರೆ. ಚಿತ್ರ ಜನವರಿ 10ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com