ಸಾರಾ ಅಲಿಖಾನ್
ಬಾಲಿವುಡ್
ಬಿಕಿನಿಯಲ್ಲಿ ತಮ್ಮನೊಂದಿಗೆ ಪೋಸ್: ಸಾರಾ ಅಲಿಖಾನ್ ವಿರುದ್ಧ ನೆಟ್ಟಿಗರು ಗರಂ!
ಬಾಲಿವುಡ್ ನಟಿ ಸಾರಾ ಅಲಿಖಾನ್ ಬಿಕಿನಿಯಲ್ಲಿ ಸಹೋದರ ಇಬ್ರಾಹಿಂ ನೊಂದಿಗೆ ಪೋಸ್ ನೀಡಿ ಟ್ರೋಲಾಗಿದ್ದಾರೆ. ಬಿಕಿನಿ ಉಡುಪಿನಲ್ಲಿ ತಮ್ಮನ ಜೊತೆಗೆ ಪೋಸ್ ನೀಡಿರುವುದಕ್ಕ ಸಾರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಸಾರಾ ಅಲಿಖಾನ್ ಬಿಕಿನಿಯಲ್ಲಿ ಸಹೋದರ ಇಬ್ರಾಹಿಂ ನೊಂದಿಗೆ ಪೋಸ್ ನೀಡಿ ಟ್ರೋಲಾಗಿದ್ದಾರೆ. ಬಿಕಿನಿ ಉಡುಪಿನಲ್ಲಿ ತಮ್ಮನ ಜೊತೆಗೆ ಪೋಸ್ ನೀಡಿರುವುದಕ್ಕ ಸಾರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಸಹೋದರ ಇಬ್ರಾಹಿಂ ಜನ್ಮ ದಿನವಾದ ಮಾರ್ಚ್ 3 ರಂದು ತಮ್ಮನ ಜೊತೆಗೆ ಇರಲು ಸಾಧ್ಯವಾಗಲಿಲ್ಲ ಎಂದು ಸಾರಾ ಸೋಷಿಯಲ್ ಮೀಡಿಯಾಗಳಲ್ಲಿ ಬೇಸರ ವ್ಯಕ್ತಪಡಿಸಿ, ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಬರ್ತ್ ಡೇ ವಿಷ್ ಮಾಡಿದ್ದರ ಜೊತೆಗೆ ಮಾಲ್ಡೀವ್ಸ್ ನಲ್ಲಿ ಕುಟುಂಬದ ಜೊತೆ ಕಾಲ ಕಳೆದಿದ್ದ ಹಳೆಯ ಪೋಟೋಗಳನ್ನು ಹಂಚಿಕೊಂಡಿದ್ದರು.
ಈ ಪೋಟೋಗಳಿಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಹೋದರ ಹಿಂದೆ ಇದ್ದು ಬಿಕಿನಿಯಲ್ಲಿ ಪೋಸ್ ನೀಡುವುದಕ್ಕೆ ನಾಚಿಕೆಯಾಗಲಿಲ್ವಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ