ಬಾಲಿವುಡ್ ನಟ ಸತ್ಯಜೀತ್ ದುಬೆ ತಾಯಿಗೆ ಕೋವಿಡ್-19 ಪಾಸಿಟಿವ್

ಪ್ರಸ್ಥಾನಂ ಚಿತ್ರದಲ್ಲಿ ಸಂಜಯ್ ದತ್, ಅಲಿ ಫಜಲ್ ಮತ್ತು ಮೊನಿಷಾ ಕೊಯಿರಾಲಾ ಅವರೊಂದಿಗೆ ಅಭಿನಯಿಸಿದ್ದ ಬಾಲಿವುಡ್ ನಟ ಸತ್ಯಜೀತ್ ದುಬೆ ಅವರ ತಾಯಿಗೆ ಕೋವಿಡ್- ಸೋಂಕು ತಗುಲಿರುವುದು ದೃಢಪಟ್ಟಿದೆ.  
ಸತ್ಯಜೀತ್ ದುಬೆ ಹಾಗೂ ಅವರ ತಾಯಿಯ ಚಿತ್ರ
ಸತ್ಯಜೀತ್ ದುಬೆ ಹಾಗೂ ಅವರ ತಾಯಿಯ ಚಿತ್ರ
Updated on: 

ನವದೆಹಲಿ: ಪ್ರಸ್ಥಾನಂ ಚಿತ್ರದಲ್ಲಿ ಸಂಜಯ್ ದತ್, ಅಲಿ ಫಜಲ್ ಮತ್ತು ಮೊನಿಷಾ ಕೊಯಿರಾಲಾ ಅವರೊಂದಿಗೆ ಅಭಿನಯಿಸಿದ್ದ ಬಾಲಿವುಡ್ ನಟ ಸತ್ಯಜೀತ್ ದುಬೆ ಅವರ ತಾಯಿಗೆ ಕೋವಿಡ್- ಸೋಂಕು ತಗುಲಿರುವುದು ದೃಢಪಟ್ಟಿದೆ.  

ತೀವ್ರ, ಜ್ವರದಿಂದಾಗಿ ಬಳಲುತ್ತಿದ್ದ ತಮ್ಮ ತಾಯಿಯನ್ನು ಗುರುವಾರ ಪರೀಕ್ಷೆಗೊಳಪಡಿಸಿದಾಗ ಕೋವಿಡ್- 19 ತಗುಲಿರುವುದು ದೃಢಪಟ್ಟಿತು. ಅಂದಿನಿಂದ ತಾನು ಹಾಗೂ ತನ್ನ ತಂಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದು, ಈವರೆಗೂ ಯಾವುದೇ ಸೋಂಕು ಕಂಡುಬಂದಿಲ್ಲ. ಚೆನ್ನಾಗಿರುವುದಾಗಿ ಸತ್ಯಜೀತ್ ದುಬೆ ಇನ್ಸಾಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ. 

ಫೋನ್ ಹಾಗೂ ವಿಡಿಯೋ ಕಾಲ್ ಮೂಲಕ ತಾಯಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಮಾನಸಿಕವಾಗಿ ತಮ್ಮಗೆ ಧೈರ್ಯ ತುಂಬಿದ ನೆರೆ ಹೊರೆಯವರು ಹಾಗೂ ಸಮಾಜಕ್ಕೆ ಚಿರಖುಣಿಯಾಗಿರುತ್ತೇವೆ. ಈ ಸಾಂಕ್ರಾಮಿಕ ರೋಗ ಮನುಷ್ಯರನ್ನು ಹೀಗೆ ಸಮೀಪಕ್ಕೆ ತರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com