ಕ್ಯಾನ್ಸರ್ ನಿಂದ 26ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಬಾಲಿವುಡ್ ಪ್ರತಿಭಾನ್ವಿತ ನಟ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ಕಾಮಿಡಿ ನಟ ಮೋಹಿತ್ ಬಘೇಲ್ ತಮ್ಮ 26ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ, ಮಥುರಾದಲ್ಲಿ ಶನಿವಾರ ನಿಧನರಾಗಿದ್ದಾರೆ.
ಮೋಹಿತ್ ಬಘೇಲ್
ಮೋಹಿತ್ ಬಘೇಲ್
Updated on: 

ಮುಂಬಯಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ಕಾಮಿಡಿ ನಟ ಮೋಹಿತ್ ಬಘೇಲ್ ತಮ್ಮ 26ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ, ಮಥುರಾದಲ್ಲಿ ಶನಿವಾರ ನಿಧನರಾಗಿದ್ದಾರೆ.

ಮೂಲತಃ ಉತ್ತರ ಪ್ರದೇಶದವರಾದ ಮೋಹಿತ್‌ ಬಘೇಲ್‌ 'ಚೋಟೆ ಮಿಯಾ' ಕಾಮಿಡಿ ಶೋ ಮೂಲಕ ಫೇಮಸ್‌ ಆಗಿದ್ದರು. ನಂತರ ಅವರಿಗೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಲ್ಮಾನ್‌ ಖಾನ್‌ ಜೊತೆ 'ರೆಡಿ' ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಅವರು ಮನೆಮಾತಾಗಿದ್ದರು. 

ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ಪರಿಣೀತಿ ಚೋಪ್ರಾ ಜೋಡಿಯಾಗಿ ನಟಿಸಿದ್ದ 'ಜಬರಿಯಾ ಜೋಡಿ' ಸಿನಿಮಾದಲ್ಲೂ ಮೋಹಿತ್‌ ಬಣ್ಣ ಹಚ್ಚಿದ್ದರು.ಮುಂಬರುವ 'ಬಂಟಿ ಔರ್‌ ಬಬ್ಲಿ 2' ಚಿತ್ರದಲ್ಲೂ ಮೋಹಿತ್‌ ನಟಿಸಬೇಕಿತ್ತು. ಅಷ್ಟರಲ್ಲಾಗಲೇ ವಿಧಿ ತನ್ನ ಆಟ ಪ್ರದರ್ಶಿಸಿದೆ. ಅವರ ನಿಧನದ ಸುದ್ದಿಯನ್ನು ಖಚಿತ ಪಡಿಸಿರುವ 'ಡ್ರೀಮ್‌ ಗರ್ಲ್' ಚಿತ್ರದ ನಿರ್ದೇಶಕ ರಾಜ್‌ ಶಾಂಡಿಲ್ಯ ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com