ಅರ್ಜುನ್ ಕಪೂರ್ ಗರ್ಲ್ ಫ್ರೆಂಡ್ ಮಲೈಕಾ ಅರೊರಾಗೂ ಕೋವಿಡ್-19 ಪಾಸಿಟಿವ್

ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಕೊರೋನಾ ಸೋಂಕು ತಗುಲಿದ ನಂತರ ಇದೀಗ ಅವರ ಗರ್ಲ್ ಫ್ರೆಂಡ್, ನಟಿ ಮಲೈಕಾ ಅರೊರಾಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅರ್ಜುನ್ ಕಪೂರ್, ಮಲೈಕಾ ಅರೋರಾ
ಅರ್ಜುನ್ ಕಪೂರ್, ಮಲೈಕಾ ಅರೋರಾ

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಕೊರೋನಾ ಸೋಂಕು ತಗುಲಿದ ನಂತರ ಇದೀಗ ಅವರ ಗರ್ಲ್ ಫ್ರೆಂಡ್, ನಟಿ ಮಲೈಕಾ ಅರೊರಾಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೋಂಕು ತಗುಲಿರುವುದನ್ನು ಅರ್ಜುನ್ ಕಪೂರ್ ಖಚಿತಪಡಿಸಿದ ನಂತರ ಮಲೈಕಾ ಅರೊರಾಗೂ ಕೋವಿಡ್-19 ಪಾಸಿಟಿವ್ ಬಂದಿರುವುದನ್ನು ಆಕೆಯ ಸಹೋದರಿ ಅಮೃತಾ ಅರೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮಲೈಕಾ ಅರೋರಾ ಕೂಡಾ ಖಚಿತಪಡಿಸಿದ್ದು,ಯಾವುದೇ ರೀತಿಯ ರೋಗ ಲಕ್ಷಣ ಕಂಡುಬಂದಿಲ್ಲ, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನಲ್ಲಿರುವುದಾಗಿ ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ಪಾಸಿಟಿವ್ ಹೊಂದಿರುವುದನ್ನು ನಟ ಅರ್ಜುನ್ ಕಪೂರ್ ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com