ಶಿವಸೇನೆ 'ಸೋನಿಯಾ ಸೇನೆ'ಯಾಗಿ ಮಾರ್ಪಟ್ಟಿದೆ: ನಟಿ ಕಂಗನಾ ರಣಾವತ್

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ದೊಡ್ಡದಾಗಿ ದನಿಯೆತ್ತಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು,  ಆಡಳಿತಾರೂಢ ಶಿವಸೇನೆ ವಿರುದ್ಧ ಗುರುವಾರ ತೀವ್ರವಾಗಿ ಗುಡುಗಿದ್ದಾರೆ. 
ಕಂಗನಾ ರಣಾವತ್
ಕಂಗನಾ ರಣಾವತ್
Updated on: 

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ದೊಡ್ಡದಾಗಿ ದನಿಯೆತ್ತಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು,  ಆಡಳಿತಾರೂಢ ಶಿವಸೇನೆ ವಿರುದ್ಧ ಗುರುವಾರ ತೀವ್ರವಾಗಿ ಗುಡುಗಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಂಗನಾ ಆವರು, ಶಿವಸೇನೆ ಅಧಿಕಾರಕ್ಕಾಗಿ ತನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿದ್ದು, ಇದೀಗ 'ಸೋನಿಯಾ ಸೇನೆ'ಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. 

ಶಿವಸೇನೆಗಾಗಿ ಶ್ರೀ ಬಾಳ ಸಾಹೇಬ್ ಠಾಕ್ರೆ ಅವರು ನಿರ್ಮಿಸಿದ್ದ ಸಿದ್ಧಾಂತಗಳನ್ನು ಇಂದು ಅಧಿಕಾರಕ್ಕಾಗಿ ಮಾರಾಟ ಮಾಡಲಾಗಿದೆ. ಇದೀಗ ಶಿವಸೇನೆ ಸೋನಿಯಾ ಸೇನೆಯಾಗಿ ಮಾರ್ಪಟ್ಟಿದೆ. ನಾನಿಲ್ಲದ ಸಂದರ್ಭದಲ್ಲಿ ಮನೆಯನ್ನು ಕೆಡವಿದ ಗೂಂಡಾಗಳನ್ನು ಮಹಾನಗರ ಪಾಲಿಕೆ ಎಂದು ಕರೆಯಬೇಡಿ. ಈ ರೀತಿ ಕರೆದು ಸಂವಿಧಾನವನ್ನು ಈ ರೀತಿಯಾಗಿ ಅವಮಾನಿಸಬೇಡಿ ಎಂದು ಬರೆದುಕೊಂಡಿದ್ದಾರೆ. 

ಮುಂಬೈನ ಬಾಂದ್ರಾದಲ್ಲಿರುವ ಮನೆಯನ್ನು ಕಂಗನಾ ಅವರು ಅಕ್ರಮವಾಗಿ ಮಾರ್ಪಡಿಸಿದ್ದಾರೆಂದು ಆರೋಪಿಸಿದ್ದ ಶಿವಸೇನೆ ಆಡಳಿತದ ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು, ನಿನ್ನೆಯಷ್ಟೇ ಕಂಗನಾ ಅವರ ಮನೆಯ ಕೆಲ ಭಾಗಗಳನ್ನು ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಕಂಗನಾ ಅವರು ಹೈಕೋರ್ಟ್ ಮೆಟ್ಟಿಲೇರಿ ತಡೆಯನ್ನೂ ತಂದಿದ್ದರು. ಈ ವೇಳೆ ಪಾಲಿಕೆ ಅಧಿಕಾರಿಗಳ ದುಡುತನದ ಬಗ್ಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಈ ನಡುವೆ ಕೇಂದ್ರ ಸರ್ಕಾರದಿಂದ ವೈ+ ಶ್ರೇಣಿಯ ಭದ್ರತೆ ಪಡೆದಿರುವ ಕಂಗನಾ ಅವರು ನಿನ್ನೆಯಷ್ಟೇ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸಿದ್ದು. ಈ ಮೂಲಕ ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದಿದ್ದ ಮಹಾರಾಷ್ಟ್ರದ ಗೃಹ ಸಚಿವ ಹಾಗೂ ಶಿವಸೇನೆಗೆ ಸಡ್ಡು ಹೊಡೆದು ನಿಂತು ಬೆದರಿಕೆಗೆ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಕಂಗನಾ ರವಾನಿಸಿದ್ದಾರೆ, ಇನ್ನು ಕಂಗನಾರನ್ನು ಬಿಜೆಪಿ ಬೆಂಬಲಿಸಿದ್ದು, ಇದು ದ್ವೇಷದ ರಾಜಕೀಯಕ್ಕೆ ಉದಾಹರಣೆ ಎಂದು ಟೀಕಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com