ನಟಿ ಹೇಮಾಮಾಲಿನಿಗೆ ಅನಾರೋಗ್ಯ: ವದಂತಿಗಳ ವಿರುದ್ದ ಕಿಡಿಕಾರಿದ ಪುತ್ರಿ ಇಶಾ ಡಿಯೋಲ್

ಅನಾರೋಗ್ಯ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ವದಂತಿಗಳ ವಿರುದ್ಧ ನಟಿ ಇಶಾ ಡಿಯೋಲ್ ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಇಶಾ ಡಿಯೋಲ್ ಹಾಗೂ ಹೇಮಾ ಮಾಲಿನಿ
ಇಶಾ ಡಿಯೋಲ್ ಹಾಗೂ ಹೇಮಾ ಮಾಲಿನಿ

ಮುಂಬೈ: ಅನಾರೋಗ್ಯ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ವದಂತಿಗಳ ವಿರುದ್ಧ ನಟಿ ಇಶಾ ಡಿಯೋಲ್ ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನನ್ನ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಅವರ ಆರೋಗ್ಯ ಕುರಿತು ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು. ಇಂತಹ ವದಂತಿಗಳಿಗೆ ಕಿವಿಕೊಡದಿರಿ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. 

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಹೇಮಾಮಾಲಿನಿ ಕೂಡ ಅನಾರೋಗ್ಯ ಹಿನ್ನೆಲೆಯ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. 

ವದಂತಿಗಳ ಕುರಿತು ಸ್ವತಃ ಹೇಮಾಮಾಲಿನಿ ಕೂಡ ಹೇಳಿಕೆ ನೀಡಿದ್ದು, ಕೆಲ ಸುದ್ದಿಗಳನ್ನು ಕೇಳಿ ಕೆಲವರು ಕಾಳಜಿ ತೋರಿಸುತ್ತಿದ್ದಾರೆ. ಅಂತಹ ಯಾವ ಪರಿಸ್ಥಿತಿಗಳೂ ಇಲ್ಲ. ಕೃಷ್ಣ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com