ಇದು ಕರುಣೆ ಇಲ್ಲದ ವರ್ಷ: ಪ್ರಿಯಾಂಕಾ ಚೋಪ್ರಾ

ಮಹಾರಾಷ್ಟ್ರದ ಪರಿಸ್ಥಿತಿಗೆ ಮರುಗಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಇದು ನಿರ್ದಯಿ ವರ್ಷದಂತೆ ಭಾಸವಾಗುತ್ತಿದೆ. ನಿಸರ್ಗ ಚಂಡಮಾರುತದ ದೃಷ್ಟಿಯಿಂದ ಜನತೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಮುಂಬೈ: ಒಂದು ಕಡೆ ಕೊರೋನಾ ಮಹಾಮಾರಿ ಅಟ್ಟಹಾಸ, ಮತ್ತೊಂದೆಡೆ ನಿಸರ್ಗ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ನೆರೆಯ ಮಹಾರಾಷ್ಟ್ರದ ಜನತೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

ಮಹಾರಾಷ್ಟ್ರದ ಪರಿಸ್ಥಿತಿಗೆ ಮರುಗಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಇದು ನಿರ್ದಯಿ ವರ್ಷದಂತೆ ಭಾಸವಾಗುತ್ತಿದೆ. ನಿಸರ್ಗ ಚಂಡಮಾರುತದ ದೃಷ್ಟಿಯಿಂದ ಜನತೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ಉತ್ತರ ಕರಾವಳಿ ಪ್ರದೇಶದಲ್ಲಿ ಗಂಟೆಗೆ 11 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಟ್ವಿಟರ್ ನಲ್ಲಿ ಬಾಂದ್ರಾ- ವೊರ್ಲಿ ಸಮುದ್ರ ಸಂಪರ್ಕಿಸುವ ರಸ್ತೆಯ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಪ್ರಿಯಾಂಕಾ, ನನ್ನ ತಾಯಿ , ಸಹೋದರ ಸೇರಿದಂತೆ 20 ಮಿಲಿಯನ್ ಜನಸಂಖ್ಯೆ ಇರುವ ಮುಂಬೈನತ್ತ ನಿಸರ್ಗ ಚಂಡಮಾರುತ ಸಾಗುತ್ತಿದೆ. 1891ರಿಂದಲೂ ಗಂಭೀರ ರೀತಿಯ ಚಂಡಮಾರುತದ ಭೂ ಕುಸಿತದಂತಹ ಅನುಭವವನ್ನು ಮುಂಬೈ ಕಂಡಿಲ್ಲ, ಇದು ವಿಶೇಷವಾಗಿ ವಿನಾಶಕಾರಿಯಾದದ್ದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ವರ್ಷ ಸರಿಯಾಗಿಲ್ಲ, ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಅನುಸರಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ  ಮೂಲಕ ಸುರಕ್ಷಿತವಾಗಿ ಇರಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com