ಬಾಲಿವುಡ್ ನಟ ಅರ್ಜುನ್ ರಾಂಪಲ್ ನಿವಾಸ, ಕಚೇರಿ ಮೇಲೆ ಎನ್ ಸಿಬಿ ದಾಳಿ

ಬಾಲಿವುಡ್ ನಟ ಅರ್ಜುನ್ ರಾಂಪಲ್ ಅವರ ಮುಂಬೈನಲ್ಲಿನ ನಿವಾಸ ಮತ್ತು ಕಚೇರಿ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ.
ಬಾಲಿವುಡ್ ನಟ ಅರ್ಜನ್ ರಾಂಪಾಲ್
ಬಾಲಿವುಡ್ ನಟ ಅರ್ಜನ್ ರಾಂಪಾಲ್

ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಲ್ ಅವರ ಮುಂಬೈನಲ್ಲಿನ ನಿವಾಸ ಮತ್ತು ಕಚೇರಿ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ಡ್ರಗ್ ಸಂಬಂಧಿತ ಕೇಸ್ ನಲ್ಲಿ ಭಾನುವಾರ ಬಂಧಿಸಲಾಗಿರುವ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ  ಪತ್ನಿ ಮತ್ತು ನಾಲ್ವರು ಡ್ರಗ್ ಪೆಡ್ಲರ್ ಗಳಿಗೆ ಇಂದು ಬೆಳ್ಳಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಈ ಮಧ್ಯೆ ಎನ್ ಸಿಬಿಯಿಂದ ನೋಟಿಸ್ ನೀಡಲಾಗಿದ್ದ ಫಿರೋಜ್ ನಾಡಿಯಾಡ್ವಾಲಾ ವಿಚಾರಣೆಗಾಗಿ ಅಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಅವರ ಪತ್ನಿ ಮತ್ತಿತರನ್ನು ವಶಕ್ಕೆ ಪಡೆಯಲು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಭಾನುವಾರ ಡ್ರಗ್ ಕೇಸ್ ನಲ್ಲಿ ನಾಡಿಯಾಡ್ವಾಲಾ ಅವರ ಮನೆ ಮೇಲೆ ದಾಳಿ ನಡೆಸಿದ ಎನ್ ಸಿಬಿ, ನಾಡಿಯಾಡ್ವಾಲಾ ಅವರ ಪತ್ನಿ ಸಬೀನಾ ಸಯೀದ್ ಅವರನ್ನು ಬಂಧಿಸಿತ್ತು. ದಾಳಿ ವೇಳೆ 10 ಅವರ ಮನೆಯಲ್ಲಿ 10 ಗ್ರಾಮ್ ಗಾಂಜ ಸಿಕ್ಕಿತ್ತು. ಅದನ್ನು ವಹೀದ್ ಮತ್ತು ಅಬ್ದುಲ್ ಕದಿರ್ ಶೇಖ್ ಎಂಬುವರಿಂದ ಅಕ್ರಮವಾಗಿ ಖರೀದಿಸಲಾಗಿತ್ತು ಎಂದು ಎನ್ ಸಿಬಿ ಹೇಳಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com