ಬಾಲಿವುಡ್ ಡ್ರಗ್ಸ್ ಜಾಲ: ಆರು ಗಂಟೆಗಳ ನಟ ಅರ್ಜುನ್ ರಾಂಪಾಲ್ ಗೆ ಎನ್ ಸಿಬಿ ಡ್ರಿಲ್ 

ಬಾಲಿವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ  ನಟ ಅರ್ಜುನ್ ರಾಂಪಾಲ್ ಅವರನ್ನು ಇಂದು ಆರು ಗಂಟೆಗಳ ಕಾಲ ಮಾದಕವಸ್ತು ನಿಯಂತ್ರಣ ಬ್ಯೂರೋ( ಎನ್ ಸಿಬಿ) ವಿಚಾರಣೆಗೊಳಪಡಿಸಿತು.

Published: 13th November 2020 08:20 PM  |   Last Updated: 14th November 2020 12:19 PM   |  A+A-


Arjun_Rampal1

ಅರ್ಜುನ್ ರಾಂಪಾಲ್

Posted By : Nagaraja AB
Source : PTI

ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ  ನಟ ಅರ್ಜುನ್ ರಾಂಪಾಲ್ ಅವರನ್ನು ಇಂದು ಆರು ಗಂಟೆಗಳ ಕಾಲ ಮಾದಕವಸ್ತು ನಿಯಂತ್ರಣ ಬ್ಯೂರೋ( ಎನ್ ಸಿಬಿ) ವಿಚಾರಣೆಗೊಳಪಡಿಸಿತು. ಇದೇ ಪ್ರಕರಣದಡಿ ಅರ್ಜನ್ ರಾಂಪಾಲ್ ಅವರ ಮುಂಬೈ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದರು.

ದಕ್ಷಿಣ ಮುಂಬೈಯಲ್ಲಿರುವ ತನಿಖಾ ಸಂಸ್ಥೆಯಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಜುನ್ ರಾಂಪಲ್,  ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಡ್ರಗ್ಸ್ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲಾ, ತಮ್ಮ ನಿವಾಸದಲ್ಲಿ ದೊರೆತ ಔಷಧಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ತನಿಖಾ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ ರಾಂಪಾಲ್, ವಿಚಾರಣೆಯಲ್ಲಿ ಅವರಿಗೆ ಸಹಕಾರ ನೀಡುತ್ತೇನೆ. ವಿಚಾರಣಾಧಿಕಾರಿಗಳಲ್ಲಿ ಒಬ್ಬರಾದ ಸಮೀರ್ ವಾಂಖೆಡೆ ಒಳ್ಳೇಯ ಕೆಲಸ ಮಾಡಿದ್ದಾರೆ ಎಂದರು.

ಡ್ರಗ್ಸ್ ಕೇಸಿನಲ್ಲಿ ಅರ್ಜನ್ ರಾಂಪಾಲ್ ಗೆ ನೋಟಿಸ್ ನೀಡಿದ ನಂತರ ಸೋಮವಾರ ಆತನ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಬುಧವಾರ ಮತ್ತು ಗುರುವಾರ ಅರ್ಜುನ್ ರಾಂಪಾಲ್ ಗರ್ಲ್ ಫ್ರೆಂಡ್ ಗೇಬ್ರಿಯೆಲಾ ಡೆಮೆಟ್ರಿಯಡ್ಸ್ ನನ್ನು ಆರು ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು. ಆಕೆಯ ಸಹೋದರ ಅಗಿಸಿಯಾಲೋಸ್ ಡೆಮೆಟ್ರಿಯೇಡ್ಸ್ ನನ್ನು ಎರಡು ಬಾರಿ ಬಂಧಿಸಲಾಗಿತ್ತು.


Stay up to date on all the latest ಬಾಲಿವುಡ್ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp