ಬಾಲಿವುಡ್ ನಟ ಸೋನು ಸೂದ್ ಗೆ ಕೋವಿಡ್-19 ನೆಗೆಟಿವ್ 

ಪ್ರತಿನಿತ್ಯ ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಅನೇಕ ಜನರಿಗೆ  ಸೇವೆ ಮಾಡುತ್ತಾ ಹೆಸರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬಂದಿದೆ. ಟ್ವಿಟರ್ ನಲ್ಲಿ ಈ ವಿಷಯವನ್ನು ಖುದ್ದು ಸೋನು  ಸೂದ್ ಅವರೇ ತಿಳಿಸಿದ್ದಾರೆ.
ನಟ ಸೋನು ಸೂದ್
ನಟ ಸೋನು ಸೂದ್

ಮುಂಬೈ: ಪ್ರತಿನಿತ್ಯ ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಅನೇಕ ಜನರಿಗೆ ಸೇವೆ ಮಾಡುತ್ತಾ ಹೆಸರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬಂದಿದೆ. ಟ್ವಿಟರ್ ನಲ್ಲಿ ಈ ವಿಷಯವನ್ನು ಖುದ್ದು ಸೋನು  ಸೂದ್ ಅವರೇ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸೋನು ಸೊದ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು.  ಟ್ವಿಟರ್ ನಲ್ಲಿ ಬಿಳಿ ಬಣ್ಣದ ಮಾಸ್ಕ್ ನೊಂದಿಗೆ ವಿಕ್ಟರಿ ಫೋಸ್ ನೀಡುತ್ತಿರುವ ಫೋಟೊ ಒಂದನ್ನು ಹಂಚಿಕೊಂಡಿರುವ ಸೋನು ಸೂದ್, ಕೋವಿಡ್-19 ನೆಗೆಟಿವ್ ರಿಪೋರ್ಟ್ ವರದಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಸೋನು​ ಸೂದ್​ ಸಾಮಾಜಿಕ ಜಾಲತಾಣದಲ್ಲಿ ಸಹಾಯಯಾಚಿಸಿದವರಿಗೆ ನಿರಂತರವಾಗಿ  ಸೇವೆ ನೀಡುತ್ತಲೇ ಇದ್ದಾರೆ. ಗಂಭೀರ ಸಮಸ್ಯೆಯಲ್ಲಿ ಬಳಲುತ್ತಿರುವ ಮಗುವೊಂದರ ಜವಾಬ್ದಾರಿಯನ್ನು ನಟ ಸೋನು​ ಸೂದ್​ ಹೊತ್ತಿದ್ದಾರೆ. 

ತೆಲಂಗಾಣದ ಕರೀಂನಗರದಲ್ಲಿ ಅವಧಿ ಪೂರ್ವವಾಗಿ ಗಂಡು ಮಗುವೊಂದು ಜನಿಸಿದ್ದು, ಹೊಟ್ಟೆಯ ಸೋಂಕಿನಿಂದ ಇನ್ಫೆಕ್ಷನ್​ನಿಂದಾಗಿ ಮಗು ಬಳಲುತ್ತಿದೆ. ಐಸಿಯುನಲ್ಲಿ ಮಗುವನ್ನು ಇರಿಸಲಾಗಿದ್ದು, ನಟನಿಂದ ಸಹಾಯದ ನಿರೀಕ್ಷೆಯಲ್ಲಿ ಮಗುವಿನ ತಂದೆ ಮಹೇಶ್​ಪೋತು ಟ್ವೀಟ್​ ಮಾಡಿದ್ದಾರೆ. ಅವರ ಟ್ವೀಟ್​ಗೆ ಸ್ಪಂದಿಸಿರುವ ಸೋನ್​ ಸೂದ್​, ಮಗುವಿನ ಸಂಪೂರ್ಣ ಜವಾಬ್ದಾರಿ ತಮ್ಮದೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com