ಸಲ್ಮಾನ್ ಖಾನ್
ಸಲ್ಮಾನ್ ಖಾನ್

'ರಾಧೆ' ಪೈರೆಸಿ ಮಾಡಬೇಡಿ, ತೊಂದರೆಗೆ ಸಿಲುಕುತ್ತೀರಿ: ಸಲ್ಮಾನ್ ಖಾನ್

ತಮ್ಮ ಹೊಸ ಚಿತ್ರ ರಾಧೆ ಸಿನಿಮಾವನ್ನು ಪೈರಸಿಯಲ್ಲಿ ನೋಡದಂತೆ ಅಭಿಮಾನಿಗಳಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮನವಿ ಮಾಡಿಕೊಂಡಿದ್ದಾರೆ. 

ಮುಂಬೈ: ತಮ್ಮ ಹೊಸ ಚಿತ್ರ ರಾಧೆ ಸಿನಿಮಾವನ್ನು ಪೈರಸಿಯಲ್ಲಿ ನೋಡದಂತೆ ಅಭಿಮಾನಿಗಳಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮನವಿ ಮಾಡಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್ ಅವರು, ರಾಧೆ ಪೈರಸಿ ಚಿತ್ರವನ್ನು ನೋಡದಿರಿ. ಸೈಬರ್ ಸೆಲ್ ನವರು ಪೈರೇಟೆಡ್ ಸೈಟ್'ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ. 

ನಮ್ಮ ಚಿತ್ರ ರಾಧೆಯನ್ನು ಒಂದು ವೀಕ್ಷೆಗೆ ರೂ.249ರಂತೆ ಸಮಂಜಸವಾದ ಬೆಲೆಯಲ್ಲಿ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಅದಾಗ್ಯೂ ಕೆಲವು ಪೈರೇಟೆಡ್ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ದಯವಿಟ್ಟು ರಾಧೆಯ ಪೈರಸಿಯಲ್ಲಿ ತೊಡಗಬೇಡಿ. ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವು ಸೈಬರ್ ಸೆಲ್ ನವರಿಂದ ಭಾರೀ ಸಮಸ್ಯೆಗೊಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. 

ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯಿ ಚಿತ್ರವು ಮೇ.13ರಂದು ಜೀ5ನ ಜೀಪ್ಲೆಕ್ಸ್ ಪೇ-ಪರ್-ವ್ಯೂ ಸೇವೆಯಲ್ಲಿ ಬಿಡುಗಡೆಯಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com