ಪೈರಸಿ ಅಲ್ಲ ಸಲ್ಲು ಭಾಯ್, ಉಚಿತವಾಗಿ ಕೊಟ್ರು ನಿಮ್ಮ ರಾಧೆ ಚಿತ್ರ ನೋಡಲ್ಲ ಎಂದು ಟ್ರೋಲ್ ಮಾಡಿದ ನೆಟ್ಟಿಗರು!
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರವನ್ನು ಯಾರೂ ಪೈರಸಿ ಮಾಡಬೇಡಿ ಎಂದು ನಟ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ನೀವು ಉಚಿತವಾಗಿ ಕೊಟ್ಟರೂ ನಿಮ್ಮ ರಾಥೆ ಚಿತ್ರ ನೋಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
Published: 17th May 2021 05:22 PM | Last Updated: 17th May 2021 05:39 PM | A+A A-

ರಾಧೆ ಪೋಸ್ಟರ್
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರವನ್ನು ಯಾರೂ ಪೈರಸಿ ಮಾಡಬೇಡಿ ಎಂದು ನಟ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ನೀವು ಉಚಿತವಾಗಿ ಕೊಟ್ಟರೂ ನಿಮ್ಮ ರಾಥೆ ಚಿತ್ರ ನೋಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
ರಾಧೆ ಚಿತ್ರಕ್ಕೂ ಪೈರಸಿ ಕಾಟ ಶುರವಾಗಿದ್ದು ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಯಾರೂ ಪೈರಸಿಯಲ್ಲಿ ಚಿತ್ರವನ್ನು ನೋಡಬೇಡಿ. ಇಲ್ಲ ಅಂದರೆ ತೊಂದರೆ ಸಿಲುಕುತ್ತೀರೀ ಎಂದು ಟ್ವೀಟಿಸಿದ್ದರು.
— Salman Khan (@BeingSalmanKhan) May 15, 2021
ಇದಕ್ಕೆ ನೆಟ್ಟಿಗರು ಸಲ್ಲು ಭಾಯ್ ನೀವು ರಾಧೆ ಚಿತ್ರವನ್ನು ಉಚಿತವಾಗಿ ಕೊಟ್ಟರು ನೋಡುವುದಿಲ್ಲ ಎಂದು ಕಾಲೆಳೆಯುತ್ತಿದ್ದಾರೆ. 249 ರೂಪಾಯಿ ಕೊಟ್ಟು ನಾನು ರಾಧೆ ಚಿತ್ರವನ್ನು ನೋಡಬೇಕಾ? ಅದರ ಬದಲು ಅದೇ ಹಣದಲ್ಲಿ ಮನೆಗೆ ಹಣ್ಣು-ತರಕಾರಿ ತೆಗೆದುಕೊಳ್ಳುತ್ತೇನೆ ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡಿದ್ದಾನೆ.
ರಾಧೆ ಚಿತ್ರ ನೋಡೋ ಬದಲು ಸುಮ್ಮನಿರುವುದು ವಾಸಿ, ಈ ಚಿತ್ರವನ್ನು ನೋಡುವ ಬದಲು ಜೈಲಿಗೆ ಹೋಗುವುದು ವಾಸಿ. ರಾಧೆ ಚಿತ್ರವನ್ನು ನೋಡುವುದೇ ಅಪರಾಧ. ರಾಧೆ ಚಿತ್ರ ನೋಡುವ ಬದಲು ಆ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುತ್ತೇನೆ ಎಂದೆಲ್ಲಾ ಟ್ವೀಟ್ ಮಾಡುತ್ತಿದ್ದಾರೆ.
ನಮ್ಮ ಚಿತ್ರ ರಾಧೆಯನ್ನು ಒಂದು ವೀಕ್ಷೆಗೆ ರೂ.249ರಂತೆ ಸಮಂಜಸವಾದ ಬೆಲೆಯಲ್ಲಿ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಅದಾಗ್ಯೂ ಕೆಲವು ಪೈರೇಟೆಡ್ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ದಯವಿಟ್ಟು ರಾಧೆಯ ಪೈರಸಿಯಲ್ಲಿ ತೊಡಗಬೇಡಿ. ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವು ಸೈಬರ್ ಸೆಲ್ ನವರಿಂದ ಭಾರೀ ಸಮಸ್ಯೆಗೊಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.